ಬೆಂಗಳೂರು : ಶ್ರೀ ಹಾಲಾಡಿ ಮೇಳದವರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 27 ಜೂನ್ 2026ರಂದು ರಾತ್ರಿ 9-00 ಗಂಟೆಗೆ ‘ಕೆಂಚನೂರು ಮುಂಗಾರು ಯಕ್ಷೋತ್ಸವ’ ಅಂಗವಾಗಿ ಅದ್ಭುತ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಪ್ರೊ. ಪವನ್ ಕಿರಣಕೆರೆ ವಿರಚಿತ ‘ಪಂಜರ ಪಕ್ಷಿ’ ಪ್ರಸಂಗ ಪ್ರಸ್ತುತಗೊಳ್ಳಲಿದೆ.
ಸಂಪರ್ಕ ಹಾಗೂ ಟಿಕೆಟ್ ವಿವರಗಳಿಗಾಗಿ ಪ್ರಶಾಂತ್ ಗಾಣಿಗ ಅಜ್ರಿ: 9900431311 ಮತ್ತು ನಾಗೇಶ ಅಜ್ರಿ: 9448315199, 9900812414 ಸಂಖ್ಯೆಗಳನ್ನು ಸಂಪರ್ಕಸಿರಿ. ಗಮನಿಸಿ: ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೀವು ಸೀಟುಗಳನ್ನು ಕಾಯ್ದಿರಿಸಬಹುದು. ಕಲಾಭಿಮಾನಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

