ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 14 ಮಾರ್ಚ್ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-12’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿಯ ಹಿರಿಯ ನಾಟಕಗಾರರಾದ ಶ್ರೀ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ ಮಂಗಳೂರು)ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕೊಂಕಣಿಯ ಹಿರಿಯ ಕಾರ್ಯಕರ್ತೆಯಾದ ಶ್ರೀಮತಿ ಗೀತಾ ಸಿ. ಕಿಣಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಯತ್ರಿಗಳಾದ ಶ್ರೀಮತಿ ಸಲೋಮಿ ಡಿಸೋಜಾರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ವಲೇರಿಯನ್ ಸಿಕ್ವೇರಾ, ಮೆಲ್ವಿನ್ ವಾಸ್ ನೀರ್ಮಾರ್ಗ, ಪ್ಲಾವಿಯಾ ಕ್ಯಾಸ್ತಲಿನೊ, ಆ್ಯಂಟನಿ ಲುವಿಸ್ ಮಣಿಪಾಲ, ರೋಶನ್ ಕ್ಯಾಸ್ತಲಿನೊ, ಶೈಲಾ ಮಂಗ್ಳೂರ್ಕರ್, ಸ್ಟ್ಯಾನಿ ಡಿಸೋಜಾ, ಸತ್ಯವತಿ ಕಾಮತ್, ಸುವರ್ಣ ಗಾಡ ಹೊನ್ನಾವರ ಮತ್ತು ಪೂರ್ಣಿಮಾ ಸುರೇಶ್ ಇವರು ತಮ್ಮ ಕವಿತೆಗಳನ್ನು ವಾಚಿಸುವರು.
