Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಪೂರಕ – ಡಾ. ಅನಂತ ಪ್ರಭು ಕೆ.
    Theatre

    ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಪೂರಕ – ಡಾ. ಅನಂತ ಪ್ರಭು ಕೆ.

    April 1, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : “ರಂಗಭೂಮಿ ವಿನಯತೆಯನ್ನು ಕಲಿಸುತ್ತದೆ. ವಿನಯತೆಯಿಂದ ಯೋಗ್ಯತೆ ಬರುತ್ತದೆ. ಯೋಗ್ಯತೆ ಕಾರಣ ಧನವನ್ನು ಪಡೆಯುತ್ತಾನೆ. ಧನದಿಂದ ಧರ್ಮ, ಆ ಧರ್ಮದಿಂದ ಸುಖವನ್ನು ಪಡೆಯುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಪೂರಕ” ಎಂದು ಖ್ಯಾತ ವೈದ್ಯ ಡಾ. ಕುಂಬಳೆ ಅನಂತ ಪ್ರಭು ಹೇಳಿದರು.

    ಅವರು ಮಂಗಳೂರಿನ ಖ್ಯಾತ ಸಾಂಸ್ಕೃತಿಕ ಸಂಘಟನೆಯಾದ ‘ಕೊಂಕಣಿ ಸಾಂಸ್ಕೃತಿಕ ಸಂಘ’ ಇವರ ನೇತ್ರತ್ವದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ರಂಗ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಇವರ ಸಮರ್ಥ ನಿರ್ದೇಶನದಲ್ಲಿ ಏರ್ಪಡಿಸಿದ ಕೊಂಕಣಿ ರಂಗಭೂಮಿಯ ಕಾರ್ಯಾಗಾರ ‘ಕೊಂಕಣಿ ರಂಗಾಂತರಂಗ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮಾರ್ಚ್ 28 ಹಾಗೂ 29ರಂದು ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಭಟ್ ವಹಿಸಿದ್ದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಉದ್ಯಮಿ ನರಸಿಂಹ ಭಂಡಾರರ್ಕರ್ ಮಹಿಳೆಯರು ಕೊಂಕಣಿ ರಂಗಭೂಮಿಗೆ ಸಾಕಷ್ಟು ಆಸಕ್ತಿ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ, ಕವಿಯತ್ರಿ ಶ್ರೀಮತಿ ಶಕುಂತಳಾ ಕಿಣಿ, ಚಲನಚಿತ್ರ ಹಾಗೂ ರಂಗಭೂಮಿ ನಟರಾದ ಹರೇಕಳ ಸತೀಶ್ ನಾಯಕ್, ಪತ್ರಕರ್ತ ವೆಂಕಟೇಶ್ ಬಾಳಿಗಾ, ರಂಗನಟ ಮುರಳೀಧರ ಕಾಮತ್ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಕುಮಾರಿ ಸ್ತುತಿ ಕಿಣಿ ಕೊಂಚಾಡಿ ಪ್ರಾರ್ಥನೆ ಹಾಡಿದರು. ಅಧ್ಯಕ್ಷ ಶ್ರೀಮತಿ ಪ್ರಭಾ ಭಟ್ ಸ್ವಾಗತಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ರತ್ನಾಕರ ಕುಡ್ವಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಮತಿ ಸುವರ್ಣಿ ಪಡಿಯಾರ್ ವಂದಿಸಿದರು. ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಮಾತನಾಡಿ ಕೊಂಕಣಿ ‘ರಂಗಾಂತರಂಗ’ ಸವಿವರಗಳನ್ನು ತಿಳಿಸಿದರು. ಮುಖವರ್ಣಿಕೆ ಬಗ್ಗೆ ಪ್ರಕಾಶ್ ಅರುಣ ನಾಯಕ್, ಭರತನಾಟ್ಯದ ಮುದ್ರೆಗಳ ಕುರಿತಾಗಿ ಶ್ರೀಮತಿ ಶ್ರೀದೇವಿ ಆಚಾರ್ಯ, ಕುಮಾರಿ ಶರಧಿ ಭಟ್, ಧ್ವನಿಯ ಬಗ್ಗೆ ಶ್ರೀಮತಿ ಶಕುಂತಳಾ ಆರ್. ಕಿಣಿ ಅವರು ತರಬೇತಿ ಹಾಗೂ ಮಾಹಿತಿಗಳನ್ನು ನೀಡಿದರು.

    ಸಮಾರೋಪ ಸಮಾರಂಭದಲ್ಲಿ ಖ್ಯಾತ ನಿರೂಪಕ ಕುಂಬಳೆ ನರಸಿಂಹ ಪ್ರಭು, ಡಾ. ಮೋಹನ ಪೈ, ಶ್ರೀಮತಿ ಉಷಾ ಮೋಹನ ಪೈ, ಉಳ್ಳಾಲ ರಾಘವೇಂದ್ರ ಕಿಣಿ, ಶ್ರೀಮತಿ ಗೀತಾ ಕಿಣಿ ಮುಂತಾದವರು ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಶಿಬಿರ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಶ್ರೀಮತಿ ಸುರೇಖಾ ಆರ್. ಭಟ್, ಕೃಷ್ಣ ಕಾಮತ್, ಶ್ರೀಮತಿ ಚಂದ್ರಿಕಾ ಮಲ್ಯ ಮಾತನಾಡಿದರು.

    baikady roovari theatre workshop
    Share. Facebook Twitter Pinterest LinkedIn Tumblr WhatsApp Email
    Previous Articleಅಲಂಕಾರಿನ ಕಾಲೇಜಿನಲ್ಲಿ ಪಂಚ ಕೃತಿಗಳ ಲೋಕಾರ್ಪಣಾ ಸಮಾರಂಭ | ಏಪ್ರಿಲ್ 04
    Next Article ಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ‘ಅಷ್ಠಮ ಸಂಭ್ರಮ’ | ಏಪ್ರಿಲ್ 02
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.