Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುದಿ ವಸಂತ ಶೆಟ್ಟರಿಗೆ ನುಡಿನಮನ
    Competition

    ಕುದಿ ವಸಂತ ಶೆಟ್ಟರಿಗೆ ನುಡಿನಮನ

    November 25, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಇತ್ತೀಚೆಗೆ ನಿಧನರಾದ ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧಕರಾದ ಕುದಿ ವಸಂತ ಶೆಟ್ಟಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರ ರವಿವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಧಾರ್ಮಿಕ ಮುಖಂಡ ನಟರಾಜ್ ಹೆಗ್ಡೆ ಮಾತನಾಡಿ “ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಸಾವಿರಾರು ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಕಾರಣೀಭೂತರಾಗಿದ್ದ ಕುದಿ ವಸಂತ ಶೆಟ್ಟಿಯವರು ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಹಾಗಾಗಿ ಅವರು ಒಬ್ಬ ವ್ಯಕ್ತಿಯಾಗಿರದೆ ಸಮಾಜದ ಶಕ್ತಿಯಾಗಿದ್ದರು.” ಎಂದು ಹೇಳಿದರು.

    ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹರಿಪ್ರಸನ್ನ ಶೆಟ್ಟಿ, ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ನ್ಯಾಯವಾದಿ ಸತೀಶ್ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಡಯಟ್ ಇದರ ಪ್ರಾಂಶುಪಾಲ ಅಶೋಕ್ ಕಾಮತ್ ಮೊದಲಾದವರು ನುಡಿನಮನ ಸಲ್ಲಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಕೆ. ರಘುಪತಿ ಭಟ್, ಕುಟುಂಬದ ಹಿರಿಯರಾದ ಸತೀಶ್ ಶೋಭಾ ಶೆಟ್ಟಿ, ಸವಿತಾ ಎಲ್. ಡಿ. ಶೆಟ್ಟಿ, ಉಮಾ ಸದಾಶಿವ ಶೆಟ್ಟಿ, ಗೀತಾ ಅಶೋಕ್ ಶೆಟ್ಟಿ, ಹೇಮಾ ಸುಧಾಕರ ಶೆಟ್ಟಿ, ಡಾ. ಆಶಾ ಸುಧಾಕರ ಶೆಟ್ಟಿ, ರೇಷ್ಮಾ ಸಂತೋಷ್ ಶೆಟ್ಟಿ, ಡಾ. ಮಹಿಮಾ ಶೆಟ್ಟಿ, ಡಾ. ತ್ರಿಶಾ ಎಸ್. ಎಸ್. ಶೆಟ್ಟಿ, ಕುದಿ ಚೈತ್ರಾ ಮುಟ್ಟಿಕಲ್ಲು ಮತ್ತು ನಿಂಜೂರು ಚೈತ್ರಬೈಲು ನಡಿಮನೆ ಕುಟುಂಬಿಕರು ಪಾಲ್ಗೊಂಡಿದ್ದರು.

    ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಹಿರಿಯಡಕ ನಿರೂಪಿಸಿ, ಸುಧಾಕರ ಶೆಟ್ಟಿ ವಂದಿಸಿದರು. ಸಮಾರಂಭದಲ್ಲಿ ಕುದಿ ವಸಂತ ಶೆಟ್ಟಿ ಬದುಕಿನ ಕುರಿತು – ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ರಾಗಗಾನ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ ಹಾಗೂ ಟಿ. ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ | ನವೆಂಬರ್ 30
    Next Article ಹವ್ಯಾಸಿ ಭಾಗವತ ವಿಠ್ಠಲ ಪ್ರಭು ಕಲಾಲೀನ
    roovari

    Add Comment Cancel Reply


    Related Posts

    ಶಕ್ತಿನಗರದ ಸರಕಾರಿ ವಿದ್ಯಾ ಸಂಸ್ಥೆಯಲ್ಲಿ ‘ರಂಗೋಲಿ ಸ್ಪರ್ಧೆ’ | ಜನವರಿ 18

    January 13, 2026

    ಅರೆಹೊಳೆ ಪ್ರತಿಷ್ಠಾನದಿಂದ ಕನ್ನಡ ಕಥಾ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಜನವರಿ 30

    January 12, 2026

    ಕಾರಂತ ಥೀಮ್ ಪಾರ್ಕ್‌ನಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ | ಕೊನೆಯ ದಿನಾಂಕ ಜನವರಿ 20

    January 10, 2026

    ಸುವರ್ಣ ಮಹೋತ್ಸವದ ಅಂಗವಾಗಿ ‘ಭಜನಾ ಸ್ಪರ್ಧಾ ಸಂಭ್ರಮ -2026’ | ಜನವರಿ 11

    January 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.