ಮುಳ್ಳೇರಿಯ : ಎ.ಯು.ಪಿ. ಶಾಲೆ ಕುಂಟಾರು ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕ, ಹಳೆವಿದ್ಯಾರ್ಥಿಗಳ ಸಂಘ ಎ.ಯು.ಪಿ. ಶಾಲೆ ಕುಂಟಾರು ಇವರ ಸಹಕಾರದೊಂದಿಗೆ ಜನಸಾಮಾನ್ಯರೆಡೆಗೆ ಸಾಹಿತ್ಯ ಎಂಬ ಆಶಯದೊಡನೆ ಆಯೋಜಿಸುವ ‘ಕುಂಟಾರು ಸಾಹಿತ್ಯೋತ್ಸವ – 2026’ ಕಾರ್ಯಕ್ರಮವು ದಿನಾಂಕ 15 ಮಾರ್ಚ್ 2026ರಂದು ಕುಂಟಾರು ಶಾಲೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9-30 ಗಂಟೆಗೆ ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮತ್ತು ಪುಸ್ತಕ ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಕಾಸರಗೋಡು ಸಮಾರಂಭದ ಅಧ್ಯಕ್ಷತೆ ವಹಿಸುವರು. ಪುಸ್ತಕ ಪ್ರದರ್ಶನವನ್ನು ಖ್ಯಾತ ಚಲನಚಿತ್ರ ನಟ ಚಿನ್ನಾ ಕಾಸರಗೋಡು, ವಸ್ತು ಪ್ರದರ್ಶನವನ್ನು ಕಾರಡ್ಕ ಗ್ರಾಮ ಪಂ. ಅಧ್ಯಕ್ಷೆ ಜನನಿ ಎಂ., ಚಿತ್ರ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯಚಿತ್ರಗಾರ ಎಚ್.ಎಸ್. ವಿಶ್ವನಾಥ್ ಬೆಂಗಳೂರು ಉದ್ಘಾಟಿಸುವರು. ಡಾ. ಮೋಹನ ಕುಂಟಾರ್ ಪ್ರಾಸ್ತಾವಿಕ ಭಾಷಣ ಮಾಡುವರು. ಗ್ರಾಮ ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಕುಂಟಾರು ಸಾಹಿತ್ಯೋತ್ಸವ ಸಮಿತಿ ಉಪಾಧ್ಯಕ್ಷ ಜಗದೀಶ ಮಾಸ್ಟರ್, ಮುಖ್ಯ ಶಿಕ್ಷಕಿ ದಾಕ್ಷಾಯಿಣಿ, ಪಿಟಿಎ ಅಧ್ಯಕ್ಷ ಬಷೀರ್ ನಯೀಮಿ ಭಾಗವಹಿಸುವರು.
ಬೆಳಿಗ್ಗೆ ಗಂಟೆ 11-00ಕ್ಕೆ ನಡೆಯುವ ಒಂದನೇ ಗೋಷ್ಠಿಯಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ವಿಷಯವಾಗಿ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ ವಿಷವಾಗಿ ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು, ವಚನ ಸಾಹಿತ್ಯ ವಿಷಯವಾಗಿ ಡಾ. ಟಿ.ಎ.ಎನ್. ಖಂಡಿಗೆ ಮೂಡುಬಿದಿರೆ ಮಾತನಾಡುವರು. ಮಧ್ಯಾಹ್ನ 12-00ಕ್ಕೆ ನಡೆಯುವ 2ನೇ ಗೋಷ್ಠಿಯಲ್ಲಿ ‘ವ್ಯಕ್ತಿತ್ವ ವಿಕಸನ ಮತ್ತು ಸಾಹಿತ್ಯ’ ವಿಷಯವಾಗಿ ಡಾ. ವರದರಾಜ ಚಂದ್ರಗಿರಿ ಪುತ್ತೂರು, ‘ಕೃಷಿಕ ಮಹಿಳೆ ಮತ್ತು ಸಾಹಿತ್ಯ’ ವಿಷಯವಾಗಿ ಸಹನಾ ಕಾಂತಬೈಲು ಸಂಪಾಜೆ, ‘ಜಾನಪದ ಸಾಹಿತ್ಯ’ ವಿಷಯವಾಗಿ ಡಾ. ಸುಂದರ ಕೇನಾಜೆ ಸುಳ್ಯ ಮಾತನಾಡುವರು. ಮಧ್ಯಾಹ್ನ 2-00 ಗಂಟೆಗೆ 3ನೇ ಗೋಷ್ಠಿಯಲ್ಲಿ ‘ಕುವೆಂಪು ಕವಿತೆಗಳು’ ವಿಷಯವಾಗಿ ಡಾ. ಸುಧಾರಾಣಿ ಮೂಡುಬಿದಿರೆ, ‘ಕೀರ್ತನ ಸಾಹಿತ್ಯ’ ವಿಷಯವಾಗಿ ಡಾ. ಬೇಸೀ ಗೋಪಾಲಕೃಷ್ಣ ಭಟ್ ಬದಿಯಡ್ಕ, ‘ಸಣ್ಣಕತೆ, ಕಾದಂಬರಿ’ ವಿಷಯವಾಗಿ ಡಾ. ರಾಧಾಕೃಷ್ಣ ಬೆಳ್ಳೂರು ಮಾತನಾಡುವರು. 3-00 ಗಂಟೆಗೆ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಡಾ. ಧನಂಜಯ ಕುಂಬ್ಳೆ (ಕನ್ನಡ), ಸುಂದರ ಬಾರಡ್ಕ (ತುಳು), ದಿವ್ಯಗಂಗಾ (ಕನ್ನಡ), ದಿಲೀಪ್ ನಾಯರ್ (ಮಲಯಾಳಂ), ರೇಣುಕಾ ಸುಧೀರ್ ಅರಶಿನಮಕ್ಕಿ (ಕನ್ನಡ), ವಿರಾಜ್ ಅಡೂರು (ಕನ್ನಡ), ರಾಮಭಟ್ ಚೆನ್ನಂಗೋಡು (ಕರ್ಹಾ ಡ), ದಯಾನಂದ ರೈ ಕಳುವಾಜೆ (ಕನ್ನಡ), ರವೀಂದ್ರನ್ ಪಾಡಿ (ಮಲಯಾಳಂ), ಚಂದ್ರಿಕಾ ಶೆಣೈ ಮುಳ್ಳೇರಿಯ (ಕೊಂಕಣಿ), ಕೃಷ್ಣೋಜಿ ಮಾಸ್ಟರ್(ಕನ್ನಡ) ಕವನಗಳನ್ನು ವಾಚಿಸುವರು.
ಸಂಜೆ 4-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ. ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸುವರು. ಡಾ. ವೆಂಕಟಗಿರಿ ದಳವಾಯಿ, ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ ಹಂಪಿ ಸಮಾರೋಪ ಭಾಷಣ ಮಾಡುವರು. ಆಯಿಷಾ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕ.ಸಾ.ಪ. ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾರಡ್ಕ ಗ್ರಾಮ ಪಂ. ಉಪಾಧ್ಯಕ್ಷ ದಾಮೋದರ ಎಂ., ರವೀಶ ತಂತ್ರಿ ಕುಂಟಾರು, ಕುಂಟಾರು ಎ.ಯು.ಪಿ. ಶಾಲೆಯ ವ್ಯಸ್ಥಪಕ ವಿಷ್ಣು ಪ್ರಸಾದ್ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 5-00ರಿಂದ ಡಾ. ವಾಣಿಶ್ರೀ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಇವರಿಂದ ಭಾವಗಾನಾಮೃತ, ಕುಂಟಾರು ಎಯುಪಿ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

