ಮೈಸೂರು : ‘ಥೇಮಾ’ ಥಿಯೇಟರ್ ಪ್ರಸ್ತುತ ಪಡಿಸುವ ಒಡನಾಡಿ ಬಂಧು ಸಿ.ಜಿ.ಕೆ. -75 ಸಂದರ್ಭದಲ್ಲಿ ಮಾಸದ ನೆನಪು ಸರಣಿ ಕಾರ್ಯಕ್ರಮ -11ರಲ್ಲಿ ಡಾ. ಎಸ್.ವಿ. ಸುಷ್ಮಾ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಎಲ್.ಎಸ್.ಡಿ.’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 20 ಮಾರ್ಚ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ಪರಿಕಲ್ಪನೆ ಹಾಗೂ ನಟನೆ ಸುನೇತ್ರಾ ಪಂಡಿತ್, ಸ್ನೇಹ ಕಪ್ಪಣ್ಣ ಮತ್ತು ಡಾ. ಎಸ್.ವಿ. ಸುಷ್ಮಾ ಇವರು ನಿರ್ವಹಿಸಿದ್ದು, ಡಾ. ಎಸ್.ವಿ. ಕಶ್ಯಪ್ ಪರಿಕಲ್ಪನೆ ಹಾಗೂ ರಚನೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777 ಸಂಖ್ಯೆಯನ್ನು ಸಂಪರ್ಕಿಸಿರಿ.

