ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾ ಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ‘ಮಕ್ಕಳ ಹಬ್ಬ’ ಬೇಸಿಗೆ ರಂಗಶಿಬಿರವನ್ನು ದಿನಾಂಕ 13ರಿಂದ 30 ಏಪ್ರಿಲ್ 2026ರವರೆಗೆ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಶ್ರೀ ಪಂದಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಶಿಬಿರದಲ್ಲಿ 10ರಿಂದ 16 ವರ್ಷಗಳ ವಯೋಮಿತಿಯ ಮಕ್ಕಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಕೋಲಾಟ, ವೀರಗಾಸೆ, ಮಣ್ಣಾಟ, ಚಿತ್ರಕಲೆ, ರಂಗಾಟಗಳು, ಪದ್ಯ ರಚನೆ, ಯೋಗಾಸನ, ಉಪನ್ಯಾಸ, ನಾಟಕಗಳ ತಯಾರಿ, ಮುಖವಾಡ ತಯಾರಿ, ಪ್ರದರ್ಶನ, ಪ್ರಾರ್ಥನೆ ಚಿಂತನೆ ಮತ್ತು ಮಕ್ಕಳ ತೇರು ಈ ಶಿಬಿರದ ಪ್ರಮುಖ ಚಟುವಟಿಕೆಗಳು. ಹೆಚ್ಚಿನ ಮಾಹಿತಿಗೆ 94483 98144, 99720 07015, 96631 77254 ಸಂಪರ್ಕಿಸಿರಿ.

