ಮಂಗಳೂರು : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ದಿನಾಂಕ 27 ಮಾರ್ಚ್ 2026ರಂದು ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮಂಗಳೂರು ಮೂಲದ ಅಗರಿ ಎಂಟರ್ ಪ್ರೈಸಸ್ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಮತ್ತು ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಶ್ರೀ ಗೋಪಾಲಕೃಷ್ಣ ಶೆಟ್ಟಿ ಹಾಗೂ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕರುಣಾಕರ ಬಲ್ಕೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ರಂಗ ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಭರತನಾಟ್ಯ ಗುರುಗಳಾದ ವಿದುಷಿ ಸುಮಂಗಲ ರತ್ನಾಕರ್, ಕಲಾ ಪೋಷಕರಾದ ರೊ. ಶ್ರೀ ಸತೀಶ್ ಬೋಳಾರ್ ಮತ್ತು ಕಲಾ ಸಂಘಟಕರಾದ ಶ್ರೀ ಕರುಣಾಕರ ಶೆಟ್ಟಿ ಇವರನ್ನು ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಂಗಸಂಗಾತಿ ಮಂಗಳೂರು ಇದರ ಸಂಚಾಲಕರಾದ ಶಶಿರಾಜ್ ರಾವ್ ಕಾವೂರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ನಜರ್ ಅಹಮ್ಮದ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಸಮೀರ್ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.
