Subscribe to Updates

    Get the latest creative news from FooBar about art, design and business.

    What's Hot

    ಸುಳ್ಳದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಿಚಾರಗೋಷ್ಠಿ

    February 26, 2026

    ಪುಸ್ತಕ ವಿಮರ್ಶೆ | ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡಿಸುವ ‘ಕಿರಿಯರ ಸಚಿತ್ರ ರಾಮಾಯಣ’

    February 26, 2026

    ಮಂಗಳೂರು ವಿ.ವಿ.ಯ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರಕಟ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಚೊಚ್ಚಲ ಪ್ರದರ್ಶನ ಮತ್ತು ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ | ಸೆಪ್ಟೆಂಬರ್ 4ರಂದು
    Drama

    ಮಂಗಳೂರಿನಲ್ಲಿ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಚೊಚ್ಚಲ ಪ್ರದರ್ಶನ ಮತ್ತು ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ | ಸೆಪ್ಟೆಂಬರ್ 4ರಂದು

    September 3, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email





    ಮಂಗಳೂರು : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ದಿನಾಂಕ 04-09-2023ರ ಸೋಮವಾರ ಸಂಜೆ 6 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ’ ತಂಡ ಅಭಿನಯಿಸುವ ಕಲಾಸವ್ಯಸಾಚಿ ಪ್ರಶಾಂತ ಸಿ.ಕೆ. ವಿರಚಿತ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಉದ್ಘಾಟನಾ ಪ್ರದರ್ಶನ ನಡೆಯಲಿದೆ.

    ಇದೇ ಸಂದರ್ಭದಲ್ಲಿ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ ಮತ್ತು ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್ ಭಟ್‌ ಅವರಿಗೆ ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಗೋಪಿನಾಥ್ ಭಟ್ ಅವರು ರಂಗಭೂಮಿಯಲ್ಲಿ 100ಕ್ಕೂ ಹೆಚ್ಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

    ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್ ಚೌಟ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕಲಾಮಾಣಿಕ್ಯ ವಿಜಯಕುಮಾರ್ ಕೊಡಿಯಾಲಬೈಲ್, ಯು.ಟಿ.ಫರೀದ್‌ ಫೌಂಡೇಶನ್ ಅಧ್ಯಕ್ಷರಾದ ಡಾ. ಯು.ಟಿ. ಇಫ್ತಿಕರ್ ಮತ್ತಿತರರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಾ ಸವ್ಯಸಾಚಿ ಪ್ರಶಾಂತ್‌ ಸಿ.ಕೆ. ನಿರ್ದೆಶನದಲ್ಲಿ ಪಾಡ್ದನ ಆಧಾರಿತ ತುಳು ನಾಟಕ ‘ಮಣೆ ಮ೦ಚೊದ ಮಂತ್ರಮೂರ್ತಿ’ ಚೊಚ್ಚಲ ಪ್ರದರ್ಶನ ಆಯೋಜಿಸಲಾಗಿದ್ದು, ಇದೇ ಸಂದರ್ಭ ಹಿರಿಯ ದೈವಾರಾಧಕ ಸೀನ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯೊಂದಿಗೆ ‘ಸಂವಾದ’ | ಸೆಪ್ಟೆಂಬರ್ 4ರಂದು
    Next Article ಪರಿಚಯ ಲೇಖನ | “ಯಕ್ಷ ಕಲಾನ್ವಿತೆ” ಪ್ರತಿಷ್ಠ ಎಸ್. ರೈ
    roovari

    Add Comment Cancel Reply


    Related Posts

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.