Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾರ್ಕಡದ ಭೂಮಿಕಾ ಮನೆಯಂಗಳದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’ ಮತ್ತು ಸನ್ಮಾನ ಕಾರ್ಯಕ್ರಮ
    Literature

    ಕಾರ್ಕಡದ ಭೂಮಿಕಾ ಮನೆಯಂಗಳದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’ ಮತ್ತು ಸನ್ಮಾನ ಕಾರ್ಯಕ್ರಮ

    April 25, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಲಿಗ್ರಾಮ : ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕ, ಉಡುಪಿ ಜಿಲ್ಲೆ ಕರ್ನಾಟಕ ಯಕ್ಷಧಾಮ ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ ಮಂಗಳೂರು ಮತ್ತು ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ ದಿನಾಂಕ 22-04-2024ರ ಸೋಮವಾರ ಸಂಜೆ 3.30ರಿಂದ ಕಾರ್ಕಡದ ಭೂಮಿಕಾ ಮನೆಯಂಗಳದಲ್ಲಿ ಜರುಗಿತು.

    ಉಡುಪಿ ಜಿಲ್ಲೆಯ ಕ. ಸಾ. ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಜಿ. ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರು ಕಲಾ ಸಾಹಿತಿ ಜನಾರ್ದನ ಹಂದೆ ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿದ ಅವರು “ಘರ್ಷಣೆಯಿಂದಲೇ ದೀಪದ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು. ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ ಸತತ ಸಾಹಿತ್ಯಾರಾಧನೆ ಶ್ಲಾಘನೀಯ.” ಎಂದರು.

    ಇದೇ ಸಂದರ್ಭದಲ್ಲಿ ಮಾಸ್ಟರ್ ಅಥ್ಲೆಟಿಕ್ಸ್ ಸಾಧಕರಾದ ಶ್ರೀ ದಿನೇಶ ಗಾಣಿಗ, ಡಾ. ಕೆ. ಕೃಷ್ಣಮೂರ್ತಿ ಮಯ್ಯ, ಸಾಹಿತಿ ಮತ್ತು ಕಲಾವಿದೆಯಾದ ಸುಮನಾ ಆರ್. ಹೇರ್ಳೆ ಹಾಗೂ ಖ್ಯಾತ ಲೇಖಕಿಯಾದ ಶ್ರೀಮತಿ ಸವಿತಾ ಶಾಸ್ತ್ರಿ ಇವರ ವಿಶಿಷ್ಟ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀ ಶ್ರೀಪತಿ ಹೇರ್ಳೆ, ಕೆ. ಶ್ರೀಕಾಂತ ಐತಾಳ, ಕೆ ಚಂದ್ರಶೇಖರ ಸೋಮಯಾಜಿ ಹಾಗೂ ಕೆ. ಶೇಖರ ವಾಚಿಸಿದರು.

     

    ಕ. ಸಾ. ಪ. ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಇವರು ಸುಮನಾ ಆರ್. ಹೇರ್ಳೆ ಅವರ ‘ದಡ ಸೇರದ ಅಲೆಗಳು’ ಎನ್ನುವ ಗಝಲ್ ಸಂಕಲನ ಮತ್ತು ‘ಸುಮನಸಾರ’ ಎನ್ನುವ ಷಡ್ಡಳ ಮುಕ್ತಕಗಳ ಸಂಕಲನಗಳನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾದ ಕೆ. ತಾರನಾಥ ಹೊಳ್ಳ, ಬ್ರಹ್ಮಾವರ ತಾಲೂಕಿನ ಹಾಗೂ ಉಡುಪಿ ಜಿಲ್ಲಾ ಕ. ಸಾ. ಪ. ಪದಾಧಿಕಾರಿಗಳು, ಗೆಳಯರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು, ಉಪಸ್ಥಿತರಿದ್ದರು.

    ಕಾರ್ಯಕ್ರಮದ ಪ್ರಾರಂಭದಲ್ಲಿ ಕೆ. ಚಂದ್ರಕಾಂತ ನಾಯರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಭಾವಗೀತೆ, ಕನ್ನಡ ನಾಡು ನುಡಿ ಬಿಂಬಿಸುವ ಹಾಡು, ನೃತ್ಯ ಇತ್ಯಾದಿ ಜರುಗಿದವು. ಬಳಗದ ಅಧ್ಯಕ್ಷ ಕೆ. ತಾರನಾಥ ಹೊಳ್ಳ ಪ್ರಾಸ್ತಾವಿಕ ಮಾತನಾಡಿ, ಉಪಾಧ್ಯಕ್ಷರಾದ ಶ್ರೀ ಕೆ. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ. ಶೀನ ವಂದಿಸಿದರು.
    ಸಭಾ ಕಾರ್ಯಕ್ರಮದ ಬಳಿಕ ಮಯ್ಯ ಯಕ್ಷ ಬಳಗ ಹಾಲಾಡಿ ತಂಡದ ಸದಸ್ಯರಿಂದ ‘ಕಾನಕಾಂಗಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಬಯಲಾಟ ಜನಮನ ರಂಜಿಸಿತು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ
    Next Article ಜನಪ್ರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026

    ‘ಶಾಂತಕವಿ ಸಕ್ಕರಿ ಬಾಳಾಚಾರ್ಯ ಶಾಂತರಂಗ ನಾಟಕಕಾರ ಪ್ರಶಸ್ತಿ’ಗೆ ನಾಟಕ ಕೃತಿಗಳ ಆಯ್ಕೆ

    January 13, 2026

    ‘ಮಂತ್ರ ಪುಷ್ಪ’ – ಕಥಾ ಸಂಕಲನ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಗೆ ಆಯ್ಕೆ

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.