ಬೆಂಗಳೂರು : ‘ನಮ್ದೆ ನಟನೆ’ ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ ರಾಜೇಂದ್ರ ಕಾರಂತ್ ಇವರು ಬರೆದು ನಿರ್ದೇಶಿಸಿದ ಪ್ರಭಾವಶಾಲಿ ‘ಮರಣ ಮೃದಂಗ’ ನಾಟಕವು ದಿನಾಂಕ 07-07-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಟೆಲಿಬುಕಿಂಗ್ : +91-9743190793

ಬಹಳಷ್ಟು ರಾಜಕಾರಣಿಗಳು ತಾವು ಜಿತೇಂದ್ರಿಯರು ಎಂದೇ ಭ್ರಮಿಸಿರುತ್ತಾರೆ, ಸಾವು ಬಾಗಿಲನ್ನು ತಟ್ಟುವ ತನಕ. ರಾಜ್ಯವನ್ನು ಹತ್ತು ವರ್ಷ ಆಳಿದ ನರಸಿಂಹರಾವ್ ಕೂಡ ಹಾಗೇ ಮೆರೆದಿರುತ್ತಾನೆ, ಕ್ಯಾನ್ಸರ್ ಬರುವ ತನಕ. ಅನಿವಾರ್ಯವಾಗಿ ತಾನು ನಿರಾಕರಿಸಿದ ಡಾಕ್ಟರ್ ಹತ್ತಿರವೇ ಚಿಕಿತ್ಸೆಗೆ ಬರಬೇಕಾಗುತ್ತದೆ. ಅಲ್ಲಿ ಸಾಮಾನ್ಯರ ನೋವು, ನಲಿವುಗಳು, ಸಾವಿನ ಅನುಭವ ಅವನನ್ನ ಮಾಗಿಸುತ್ತವೆ… ಅಧಿಕಾರ, ಹಣ ಸಂಪಾದನೆಗಿಂತ ಸೇವೆ ಸರ್ವ ಶ್ರೇಷ್ಠ ಸಾಧನೆ ಎಂಬ ಅರಿವಾಗುತ್ತದೆ. ಆದರೆ.. ಸಾವು ಯಾರನ್ನೂ ಬಿಡುವುದಿಲ್ಲ.
