ಬೆಳಗಾವಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಹಾಗೂ ಮರಾಠ ಮಂಡಳ ಪದವಿ ಮಹಾವಿದ್ಯಾಲಯ ಬೆಳಗಾವಿ ಸಹಯೋಗದೊಂದಿಗೆ ಮೇಘಮೈತ್ರಿ ಸಾಹಿತ್ಯ ಸಂಭ್ರಮ -2026 ಕಾರ್ಯಕ್ರಮವನ್ನು ದಿನಾಂಕ 03 ಜುಲೈ 2026ರಂದು ಮಧ್ಯಾಹ್ನ 3-30 ಗಂಟೆಗೆ ಬೆಳಗಾವಿಯ ಮರಾಠ ಮಂಡಳ ಕಾಲೇಜು ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಕೃತಿ ಲೋಕಾರ್ಪಣೆ, ಉಪನ್ಯಾಸ, ಕವಿಗೋಷ್ಠಿ ಹಾಗೂ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಆತ್ಮೀಯರೇ, ತಮ್ಮ ಇತ್ತೀಚಿನ ಸ್ವತಂತ್ರ ಕೃತಿ ಅಥವಾ ಸಂಪಾದನ ಕೃತಿ ಇದ್ದರೆ ವೇದಿಕೆಯಲ್ಲಿ ಬಿಡುಗಡೆಗೆ ಅವಕಾಶವಿದೆ ತಕ್ಷಣ ಕರೆ ಮಾಡಿ ತಿಳಿಸಬೇಕು. ಕವಿಗೋಷ್ಠಿಯಲ್ಲಿ ಭಾಗವಹಿಸುವರು ತಮ್ಮ ಹೆಸರನ್ನು ನೊಂದಾಯಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಭಾಗವಹಿಸುವರು ಸಂಪರ್ಕಕ್ಕಾಗಿ ಡಾ. ಪ್ರಕಾಶ ನರಗುಂದ 99867 67832, ಡಾ. ಜಯವೀರ ಎ.ಕೆ. 9538209141, ಪ್ರೊ. ಶ್ರೀಕಾಂತ ಪಾಟೀಲ 8105640578, ಡಾ. ಪಿ.ಎಂ. ಸಿಂಗಾರಗೊಪ್ಪ 9620525313.

