ಉಡುಪಿ : ಲಕ್ಷ್ಮೀ ಗುರುರಾಜ್ ನೃತ್ಯನಿಕೇತನ ಉಡುಪಿ (ರಿ.) ಸಂಸ್ಥೆಯ ಪೋಷಕರಾಗಿದ್ದ ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಹಾಗೂ ದಿ. ಗುರುರಾಜ್ ಐತಾಳ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 23 ಮೇ 2026ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.
ಸಹಕಾರರತ್ನ ಕೆ. ನಾರಾಯಣ ಬಲ್ಲಾಳ್ ಉದ್ಘಾಟಿಸಿ ಮಾತನಾಡಿದರು. ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ದ.ಕ. ಶಾಖೆಯ ಆಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಅತಿಥಿಯಾಗಿದ್ದರು.
ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಹಾಗೂ ದಿ. ಗುರುರಾಜ್ ಐತಾಳ್ ಕೊಡವೂರು ಸಂಸ್ಮರಣಾ ಪ್ರಶಸ್ತಿಯನ್ನು ಉಡುಪಿಯ ಹಿರಿಯ ನೃತ್ಯ ವಿದ್ವಾಂಸರಾದ ನಾಟ್ಯಾಚಾರ್ಯ ನಾರಾಯಣ ಭಟ್ ಇವರಿಗೆ ನೀಡಿ ಗೌರವಿಸಲಾಯಿತು. ಮೇದಿನೀ ಭಟ್ ಪ್ರಾರ್ಥಿಸಿದರು. ಸಂಸ್ಥೆಯ ಟ್ರಸ್ಟೀ ಚಂದ್ರಶೇಖರ್ ರಾವ್ ಸ್ವಾಗತಿಸಿದರು. ನಾಗರಾಜ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀ ಗುರುರಾಜ್ ಪ್ರಾಸ್ತಾವಿಕ ಮಾತನಾಡಿದರು. ಬಳಿಕ ನೃತ್ಯನಿಕೇತನ ಉಡುಪಿ ಸಂಸ್ಥೆಯ ಕಲಾವಿದರಿಂದ ‘ನೃತ್ಯ ನೀರಾಜನಂ’ ಭರತನಾಟ್ಯ ಪ್ರದರ್ಶನ ನಡೆಯಿತು.


