ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಕಾರ್ಯಕ್ರಮವನ್ನು ದಿನಾಂಕ 21 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದೃಶ್ಯಕಾವ್ಯ ಅರ್ಪಿಸುವ ನಂಜುಂಡೇಗೌಡ ಸಿ. ಇವರ ನಿರ್ದೇಶನದಲ್ಲಿ ‘ಮಾಯಾಬೇಟೆ’ ನಾಟಕ ಪ್ರದರ್ಶನ ನಡೆಯಲಿದೆ.

