ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಯಕ್ಷಗಾನ ತಾಳಮದ್ದಲೆ ಕುಂಬಳೆ ಪಾರ್ತಿಸುಬ್ಬ ವಿರಚಿತ ‘ಉಂಗುರ ಸಂಧಿ’ ಎಂಬ ಆಖ್ಯಾನವು ದಿನಾಂಕ 30 ಜೂನ್ 2026ರಂದು ಸಂಜೆ 4-00 ಗಂಟೆಗೆ ಪುತ್ತೂರು ಬನ್ನೂರು ಭಾರತೀ ನಗರ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಕುಮಾರಿ ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ ಕೃಷ್ಣ ಪುಣಚ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಮಾಂಬಾಡಿ ವೇಣುಗೋಪಾಲ್ ಭಟ್, ಗುಡ್ಡಪ್ಪ ಬಲ್ಯ, ಶ್ರೀಮತಿ ಮನೋರಮಾ ಜಿ. ಭಟ್, ಶ್ರೀಮತಿ ಶುಭಾ ಅಡಿಗ, ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ, ಬಡೆಕ್ಕಿಲ ಚಂದ್ರಶೇಖರ ಭಟ್, ತಾರಾನಾಥ ಸವಣೂರು ಮತ್ತು ಶ್ರೀಮತಿ ಪ್ರೇಮಲತಾ ಟಿ. ರಾವ್ ಭಾಗವಹಿಸಲಿದ್ದಾರೆ.

