ಕಾರ್ಕಳ : ಕನ್ನಡ ಸಂಘ ಕಾಂತಾವರ ಇದರ ಐವತ್ತರ ಸಂಭ್ರಮ ತೃತೀಯ ಕಾರ್ಯಕ್ರಮ ‘ಮುದ್ದಣ ಸಾಹಿತ್ಯೋತ್ಸವ -2026’ ದಿನಾಂಕ 15 ಮಾರ್ಚ್ 2026ರಂದು ಬೆಳಿಗ್ಗೆ 9-30 ಗಂಟೆಗೆ ಕಾಂತಾವರದ ರಥಬೀದಿಯಲ್ಲಿರುವ ‘ಕನ್ನಡ ಭವನ’ದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಬೆಂಗಳೂರಿನ ಪ್ರಸಿದ್ಧ ಕವಿಗಳಾದ ಪ್ರೊ. ಟಿ. ಯಲ್ಲಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎ. ಸುಬ್ಬಣ್ಣ ರೈ ಇವರು ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಕೃತಿಗಳನ್ನು ಬಿಡುಗಡಗೊಳಿಸಲಿದ್ದಾರೆ. ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಪ್ರೊ. ಡಿ.ಎ. ಶಂಕರ್ ಮೈಸೂರು, ‘ಗಮಕ ಕಲಾ ಪ್ರವಚನ’ ಪ್ರಶಸ್ತಿಯನ್ನು ಶ್ರೀ ಮುಳಿಯ ಶಂಕರ ಭಟ್ಟ, ‘ಗಮಕ ಕಲಾ ವಾಚನ’ ಪ್ರಶಸ್ತಿ’ಯನ್ನು ಶ್ರೀ ಪದ್ಯಾಣ ಗಣಪತಿ ಭಟ್, ‘ಶಿಲ್ಪಕಲಾ ಪ್ರಶಸ್ತಿ’ಯನ್ನು ಪಿ. ದಾಮೋದರ ಆಚಾರ್ಯ ಕಾರ್ಕಳ ಹಾಗೂ ‘ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ ಇವರುಗಳಿಗೆ ಪ್ರದಾನ ಮಾಡಲಾಗುವುದು.

