ಕಾಸರಗೋಡು : ಪ್ರೊ. ಶ್ರೀನಾಥ್ ಕಾಸರಗೋಡು ಇವರ ಕೊಲ್ಲಂಗಾನ ಅನಂತಶ್ರೀ ಮನೆಯಲ್ಲಿ ದಿನಾಂಕ 19 ಮೇ 2026ರಂದು ಬಹುಭಾಷಾ ಕವಿಗೋಷ್ಠಿ ಜರಗಿತು. ಹಿರಿಯ ಪತ್ರಕರ್ತ, ಸಾಹಿತಿಗಳಾದ ಮಲಾಲ್ ಜಯರಾಮ ರೈ ಉದ್ಘಾಟಿಸಿದರು.
ಲೇಖಕಿ ಅಶ್ವಿನಿ ಕೋಡಿಬೈಲು ಇವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ವೆಂಕಟ್ ಭಟ್ ಎಡನೀರು, ಪ್ರೇಮಚಂದ್ರನ್ ಚೋಂಬಾಲ, ಬಾಲಕೃಷ್ಣ ಬೇರಿಕೆ, ಸುಂದರ ಬಾರಡ್ಕ, ಕೆ.ವಿ. ಕುಮಾರನ್, ಪ್ರಸನ್ನಕುಮಾರಿ ಮರ್ದಂಬೈಲು, ವನಜಾಕ್ಷಿ ಪಿ. ಚೆಂಬ್ರಕಾನ, ಕರುಣಾಕರನ್ ಅದ್ರುಗುಳಿ, ರವಿ ನಾಯ್ಕಾಪು ಇವರುಗಳು ಭಾಗವಹಿಸಿದ್ದರು.


ಅಖಿಲೇಶ್ ನಗುಮುಗಂ ಸ್ವಾಗತಿಸಿ, ಪ್ರೊ. ಶ್ರೀನಾಥ್ ಎ. ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ನಿರೂಪಿಸಿದರು. ಬಳಿಕ ಭಜನಾ ಕಾರ್ಯಕ್ರಮ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಸಮ್ಮಿಲನ, ಸಮಾರೋಪ ಜರಗಿತು.


