ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 17 ಮೇ 2026ರಂದು ಸುರತ್ಕಲ್ಲಿನ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5-00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಡಾ. ಶುಭದಾ ಕೆ. ಇವರ ಹಾಡುಗಾರಿಕೆಗೆ ಟಿ. ಅನ್ವಿತಾ ಇವರು ವಯೋಲಿನ್, ಮಂಗಳೂರಿನ ಕೃಷ್ಣ ಪವನ್ ಕುಮಾರ್ ಇವರು ಮೃದಂಗಂನಲ್ಲಿ ಮತ್ತು ಸುರತ್ಕಲ್ಲಿನ ವಿದ್ವಾತ್ ರಾವ್ ತಂಬೂರದಲ್ಲಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಚಿದಾನಂದ ಇವರ ಶಿಷ್ಯೆ ದೀಪ್ತಿಶ್ರೀ ಎಸ್. ಜೋಗಿ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ‘ನಮ್ಮ ಟಿ.ವಿ.’ ನಿರೂಪಕ ಪ್ರಕಾಶ್ ಪುತ್ತೂರು ಇವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

