ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವತಿಯಿಂದ ‘ನಾದ ಮಾಧುರಿ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರ 2026ವನ್ನು ದಿನಾಂಕ 18, 19, 25 ಮತ್ತು 26 ಏಪ್ರಿಲ್ 2026ರಂದು ಬೆಳಿಗ್ಗೆ 9-30 ರಿಂದ 4-30ರ ತನಕ ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ನಡೆಯಲಿದೆ.
ದಿನಾಂಕ 18 ಮತ್ತು 19 ಏಪ್ರಿಲ್ 2026ರಂದು ಮೃದಂಗಂ ಕಾರ್ಯಾಗಾರವನ್ನು ಕಲ್ಲೇಕುಲಂಗಾರ ಉಣ್ಣಿ ಕೃಷ್ಣನ್ ಇವರು ಹಾಗೂ ದಿನಾಂಕ 25 ಮತ್ತು 26 ಏಪ್ರಿಲ್ 2026ರಂದು ಗಾಯನ ಕಾರ್ಯಾಗಾರವನ್ನು ಮದುರೈ ಟಿ. ಎನ್. ಎಸ್. ಕೃಷ್ಣ ಚೆನ್ನೈ ಇವರು ನಡೆಸಿಕೊಡಲಿದ್ದಾರೆ.

