Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಮತ್ತು ‘ಮುರಿದ ರೆಕ್ಕೆಗಳು’ ಕೃತಿ ಲೋಕಾರ್ಪಣೆ
    Awards

    ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಮತ್ತು ‘ಮುರಿದ ರೆಕ್ಕೆಗಳು’ ಕೃತಿ ಲೋಕಾರ್ಪಣೆ

    November 20, 2023No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಶಿವಲಿಂಗೇಗೌಡ ಅವರು ಅನುವಾದಿಸಿದ ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭ ದಿನಾಂಕ 16-11-2023ರಂದು ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡುತ್ತಾ “ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು. ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿಯವರನ್ನು ‘ರಾಜರ್ಷಿ’ ಎಂದು ಕರೆದರು ಮತ್ತು ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ ಎಂದಿದ್ದರು. ಅವರ ಆಳ್ವಿಕೆಯ ಅವಧಿಯಲ್ಲಿಯೇ ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಶಸ್ತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು 2100ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಜನರು ನಂಬಿಕೆಯಿಂದ ಇಟ್ಟಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಯೋಗ್ಯ ರೀತಿಯಲ್ಲಿ ಪ್ರದಾನ ಮಾಡುತ್ತಾ ಬಂದಿದೆ. ಒಂದು ಸಂಸ್ಥೆ ನಿತ್ಯ ನಿರಂತರವಾಗಿರಬೇಕು ಎನ್ನುವುದು ನಾಲ್ವಡಿ ಅವರ ಸಾಮಾಜಿಕ ಕಾಳಜಿಯಾಗಿತ್ತು” ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ಶ್ರೀ ಡಿ.ಆರ್.ಪಾಟೀಲ್ ಅವರು ಮಾತನಾಡಿ “ನಮ್ಮ ದೇಶದಲ್ಲಿ ಸಾಕ್ಷರರು ಆತ್ಮ ವಿಶ್ವಾಸ ಕಳೆದುಕೊಂಡು ದಾರಿತಪ್ಪುತ್ತಿದ್ದಾರೆ. ಅನಕ್ಷರಸ್ಥರು ವಿಶಾಲ ಹೃದಯದವರಿದ್ದಾರೆ. ನಮ್ಮ ತಪ್ಪನ್ನು ತಿಳಿಸುವ ಕೆಲಸ ಶಿಕ್ಷಣದಲ್ಲಿ ಆಗಬೇಕಿದೆ. ಶಿಕ್ಷಣದಲ್ಲಿ ನಮ್ಮತನವನ್ನು ಕಲಿಸುವ ಜೊತೆಗೆ ಸಮಾಜದ ಮೇಲಿನ ನಂಬಿಕೆ ವಿಶ್ವಾಸ ತಿಳಿಸುವ ಕೆಲಸ ಆಗಬೇಕಿದೆ” ಎಂದು ಹೇಳಿದರು.

    2023ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಆಂಧ್ರಪ್ರದೇಶ, ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ತೇಜಸ್ವಿ ವೆಂಕಪ್ಪ ಕಟ್ಟೀಮನಿ ಅವರು “ಇಂದು ಪಠ್ಯಕ್ರಮದಲ್ಲಿ ಹಳ್ಳಿಗಳು, ನಮ್ಮ ಮೂಲ ಸಂಸ್ಕೃತಿಗಳು, ಆಚಾರ ವಿಚಾರಗಳು ನಾಪತ್ತೆಯಾಗಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಪ್ರಾಥಮಿಕ ಶಿಕ್ಷಣ ಮಾತ್ರಭಾಷೆಯಲ್ಲಿ ಆದಾಗ ಮಾತ್ರ ನಮ್ಮ ಭಾಷೆ ಅನ್ನದ ಭಾಷೆಯಾಗುತ್ತದೆ. ದೇಶದಲ್ಲಿಯ ಬಹುತೇಕ ಪ್ರಾದೇಶಿಕ ಭಾಷೆಗಳು ನಾಪತ್ತೆಯಾಗುತ್ತಿವೆ. ನಮ್ಮ ಅನ್ನವನ್ನು ನಾವು ಕಂಡು ಕೊಳ್ಳಬೇಕು ಎಂದರೆ ಕನ್ನಡ ಕೊಳ್ಳುವ ಹಾಗೂ ಮಾರುವ ಭಾಷೆಯಾಗಿ ರೂಪಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

    ಖಲೀಲ್ ಗಿಬ್ರಾನ್ ಮಧ್ಯ ಪ್ರಾಚ್ಯ ಭಾಗಕ್ಕೆ ಆಧುನಿಕತೆಯನ್ನು ತಂದವನು ಎಂದು ವಿವರಿಸಿದ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅಧ್ಯಾತ್ಮದ ಉನ್ನತೀಕರಣವನ್ನು ಅವನು ಬರಹದ ಮೂಲಕ ಸಾಧಿಸಿದವನು. ಉತ್ತಮ ಚಿತ್ರಕಾರ ಕೂಡ ಆಗಿದ್ದ ಎಂದು ಹೇಳಿ ‘ಮುರಿದ ರೆಕ್ಕೆಗಳು’ ಕಾದಂಬರಿಯ ಮೂಲ 1912ರಲ್ಲಿ ಅರೆಬಿಕ್ ಭಾಷೆಯಲ್ಲಿ ರೂಪುಗೊಂಡ ‘ಬ್ರೂಕನ್ ವಿಂಗ್ಸ್’ ಜಗತ್ತಿನ ಮೂವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು ಚಲನಚಿತ್ರ ರೂಪವನ್ನೂ ಕೂಡ ಪಡಿದಿದೆ. ಇಂತಹ ಮಹತ್ವದ ಕೃತಿಯನ್ನು ಕೆ.ಎಂ.ಶಿವಲಿಂಗೇ ಗೌಡರು ಮೂಲದ ಸತ್ವಕ್ಕೆ ಭಂಗಬಾರದಂತೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಕೃತಿ ಮೇಲ್ನೋಟಕ್ಕೆ ದುರಂತ ಪ್ರೇಮ ಕಥನವನ್ನು ಹೊಂದಿದೆ ಎನ್ನಿಸಿದರೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು, ಏಕಾಂಗಿತನದ ಸ್ವರೂಪವನ್ನು, ಸಮಾಜದ ಹಿಡಿತವನ್ನು ಹಿಡಿದಿಟ್ಟಿದೆ. ಇದರ ಭಾಷೆ ಗದ್ಯ ಮತ್ತು ಪದ್ಯದ ನಡುವಿನ ಸೊಬಗಿನ ಹಾದಿಯದಾಗಿದ್ದು, ಅದನ್ನು ಸಮರ್ಥವಾಗಿ ತಂದಿರುವುದಕ್ಕೆ ಶಿವಲಿಂಗೇ ಗೌಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕನ್ನಡಕ್ಕೆ ಇಂತಹ ಮಹತ್ವದ ಕೃತಿಯನ್ನು ನೀಡಿದ ಅವರನ್ನು ಮತ್ತು ಇಂತಹ ಪ್ರಮುಖ ಕೃತಿಯನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಅವರು ಅಭಿನಂದಿಸಿದರು.

    ‘ಮುರಿದ ರೆಕ್ಕೆಗಳು’ ಕೃತಿಯ ಅನುವಾದಕರಾದ ಕೆ.ಎಂ.ಶಿವಲಿಂಗೇ ಗೌಡರು ಕೃತಿ ತಮ್ಮನ್ನು ಸೆಳೆದಿದ್ದಕ್ಕೆ ಕಾರಣಗಳನ್ನು ವಿವರಿಸುತ್ತಾ ಭಾವನಾತ್ಮಕವಾಗಿ ಬದುಕಿನ ಸ್ಥಾಯಿ ಕ್ಷಣಗಳನ್ನು ಹಿಡಿದಿಟ್ಟ ಕೃತಿ ತಮ್ಮ ಮನಸ್ಸಿಗೆ ತೀರಾ ಹತ್ತಿರ ಎನ್ನಿಸಿತು. ಜೀವನದ ಪ್ರತಿಕ್ಷಣದ ಅರ್ಥವನ್ನು ಶೋಧಿಸುವ ಕೃತಿಯು ಬದುಕನ್ನು ತನ್ನದೇ ಆದ ರೀತಿಯಲ್ಲಿ ವಿಸ್ತರಿಸುತ್ತದೆ. ಬರಹದಲ್ಲಿ ಇಂತಹ ಅನುಭವ ತನಗಾಗಿದ್ದು ಓದುವಿಕೆಯ ಮೂಲಕ ಅಂತಹ ಅನುಭವ ನಿಮ್ಮದೂ ಆಗಲಿ ಎಂದರು. ಖಾಸಗಿ ಆಸಕ್ತಿಯಿಂದ ಅನುವಾದ ಮಾಡಿದ್ದರೂ ಇದನ್ನು ಅರಿತು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿಯವರಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು. ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿಯವರು ಪ್ರಶಸ್ತಿ ಪುರಸ್ಕೃತರ ಪರಿಚಯ ನೀಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಉಳ್ಳಾಲ ರಾಣಿ ಅಬ್ಬಕ್ಕಳ ಸಾಹಸ ಕಥೆ’ – ವಿಚಾರ ಸಂಕಿರಣ
    Next Article ಡಾ. ಡಿ.ಎಸ್. ಕರ್ಕಿ ಅವರ 116ನೇ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ | ನವೆಂಬರ್ 22ರಂದು
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.