ಮೈಸೂರು : ರಂಗಬಂಡಿ ಮಳವಳ್ಳಿ (ರಿ.), ದ್ವಿಜೆನ್ ದಿನನಾಥ್ ಆರ್ಟ್ಸ್ ಫೌಂಡೇಷನ್ ಮತ್ತು ಚಾಂದಿನಿ ಫೌಂಡೇಶನ್ ಇವರು ಜಂಟಿಯಾಗಿ ಆಯೋಜಿಸುತ್ತಿರುವ ‘ನನ್ನ ಧ್ವನಿ’ ಎ. ರೇವತಿ ಅಭಿನಯಿಸುವ ಏಕವ್ಯಕ್ತಿ ರಂಗ ಪ್ರಯೋಗವನ್ನು ದಿನಾಂಕ 06 ಜೂನ್ 2026 ರಂದು ಸಂಜೆ 6-30 ಗಂಟೆಗೆ ಮೈಸೂರು ಕಿರು ರಂಗಮಂದಿರ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಎ. ಮಂಗೈ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಈ ನಾಟಕ ಈಗಾಗಲೇ ಸುಮಾರು 135 ಪ್ರದರ್ಶನಗಳನ್ನು ಕಂಡಿದ್ದು, ಟ್ರಾನ್ಸ್ ಸಮುದಾಯದವಳ ಹಕ್ಕು, ಸಮಾನತೆ, ಸಂಸ್ಕೃತಿ, ಪ್ರೀತಿಯಲ್ಲಿ ದೊರೆತ ಒಪ್ಪಿಗೆಯ ಬಿಡುಗಡೆಯ ನೋವು ಮತ್ತು ಹಿನ್ನಲೆಗಳ ಧ್ವನಿಯನ್ನು ತೋರಿಸುತ್ತದೆ.

