ಮೈಸೂರು : ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ಎಲ್ಲಾ ಮುನ್ನೆಚರಿಕೆಯ ಕ್ರಮಗಳೊಂದಿಗೆ ನಡೆಸುತ್ತಿದ್ದು, ಇದೇ ಜೂನ್ 18ರಂದು ಸಂಜೆ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಖ್ಯಾತ ನಾಟಕಕಾರ, ರಾಷ್ಟ್ರ ಪ್ರಶಸ್ತಿ ವಿಜೇತ, ನಿರ್ದೇಶಕ, ನಿರ್ಮಾಪಕ, ನಟ ಶ್ರೀ ಬಿ. ಸುರೇಶ ಅವರ ‘ಅಡುಗೆ ಮನೆಯಲ್ಲೊಂದು ಹುಲಿ’ ಎಂಬ ನಾಟಕವು ನಟನ ರಂಗಶಾಲೆಯ ಪ್ರಾಂಶುಪಾಲರೂ, ಯುವ ರಂಗ ನಿರ್ದೇಶಕರೂ ಆದ ಶ್ರೀ ಮೇಘ ಸಮೀರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
‘ಅಡುಗೆ ಮನೆಯಲ್ಲೊಂದು ಹುಲಿ’.. ಇದೊಂದು ಸುಳ್ಳಿನ ಪಯಣದ ಕಥಾನಕವನ್ನು ಹೇಳುವ ನಾಟಕ. ಹಾಗೆ ನೋಡಿದರೆ ‘ನಾಟಕ’ ಎನ್ನುವುದೇ ಒಂದು ಸುಳ್ಳಿನ ಆಟ. ಆದರೆ ಈ ಆಟ ಸುಳ್ಳಿನ ಮೂಲಕವೇ ಸತ್ಯವನ್ನು ಶೋಧಿಸುವಂತದ್ದು. ಹೀಗೆ ಸುಳ್ಳಿನ ಮುಖಾಂತರ ನಮ್ಮ ಸಮಾಜದ ಅನೇಕ ಸತ್ಯಗಳನ್ನು ಹುಡುಕುವ ಒಂದು ಅಪರೂಪದ ವಿಡಂಬನಾತ್ಮಕ ನಾಟಕ.
ರಂಗಾಸಕ್ತರಿಗೆ ಆತ್ಮೀಯ ಸ್ವಾಗತ. ಮಾಹಿತಿಗಾಗಿ : 7259537777, 9480468327, 9845595505 ಸಂಪರ್ಕಿಸಿ