ಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ ‘ಭೈರ’ ಮಕ್ಕಳ ಕಾದಂಬರಿಯು ಮನೆ ಮಾತಾಗಿದೆ. ಈ ಕಾದಂಬರಿಯು ವಿಶೇಷ ಕಥಾವಸ್ತುವನ್ನುಳ್ಳ ಕಾದಂಬರಿಯಾಗಿದೆ. ಬಳಸಿದ ಭಾಷೆ ಸರಳವಾಗಿದ್ದು, ಎಲ್ಲ ವಯೋಮಾನದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. 74 ಪುಟಗಳ ಕತೆಯನ್ನು ಹೊಂದಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ಈ ‘ಭೈರ’ ಕಾದಂಬರಿಯು ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಶಿವಮೊಗ್ಗದ ಕರ್ನಾಟಕ ಸಂಘದಿಂದ 2024ನೇ ಸಾಲಿನ ‘ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ’, ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ’ ಮತ್ತು ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024ನೇ ಸಾಲಿನ ‘ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸ ರಾವ್ ಪುಸ್ತಕ ದತ್ತಿ ಪ್ರಶಸ್ತಿ’.
ರಸಪ್ರಶ್ನೆ ಸ್ಪರ್ಧೆಯ ನಿಯಮಗಳು :
* ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳ ವಯಸ್ಸಿನ ಮಿತಿ 6ರಿಂದ 16 ವರ್ಷ ಮಾತ್ರ.
* 120-00 ಹಣ ಸಂದಾಯ ಮಾಡಿ ‘ಭೈರ’ ಮಕ್ಕಳ ಕಾದಂಬರಿ ಪುಸ್ತಕವನ್ನು ಪಡೆಯಬೇಕು.
* ಪುಸ್ತಕ ಓದಲು 15ರಿಂದ 20 ದಿನಗಳ ಸಮಯದ ಅವಕಾಶ ಇರುತ್ತದೆ.
* ಪುಸ್ತಕಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ 20 ಏಪ್ರಿಲ್ 2026.
* ಸ್ಪರ್ಧೆ ನಡೆಯುವ ದಿನಾಂಕ 30 ಏಪ್ರಿಲ್ 2026.
* ಮೊಬೈಲ್ ಆಪ್ ಮೂಲಕ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರಶ್ನೆಗಳು ಭೈರ ಕಾದಂಬರಿಯನ್ನು ಕುರಿತಾಗಿಯೇ ಇರುತ್ತವೆ. ನೀವು ಉತ್ತರಿಸುವಾಗ ಸಮಯ ಕೂಡ ರೆಕಾರ್ಡ್ ಆಗುವುದರಿಂದ ಸ್ಪರ್ಧೆ ಪ್ರಾಮಾಣಿಕವಾಗಿಯೇ ನಡೆಯುತ್ತದೆ.
* ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ.
* ಪ್ರಥಮ ಬಹುಮಾನ ರೂ.750=00, ದ್ವಿತೀಯ ಬಹುಮಾನ ರೂ.600=00, ತೃತೀಯ ಬಹುಮಾನ ರೂ.450=00, ಸಮಾಧಾನಕರ ರೂ.300=00.
* ಭಾಗವಹಿಸುವ ಸ್ಪರ್ಧಿಯು ಮೊದಲೇ ನಮಗೆ ತಿಳಿಸಿದಂತಹ ಫೋನ್ ನಂಬರ್ ದಿಂದ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದು.
* ಒಂದು ಸಾರಿ ಉತ್ತರಗಳನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ಅವಕಾಶವಿಲ್ಲ.
* ಪ್ರಶ್ನೆಗಳು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸರಳವಾಗಿರುತ್ತವೆ.
* ಫಲಿತಾಂಶ ಘೋಷಣೆ ದಿನಾಂಕ 05 ಮೇ 2026.
* ಬಹುಮಾನದ ಹಣವನ್ನು ಫೋನ್ ಪೇ ಮಾಡಲಾಗುವುದು. ಜೊತೆಗೆ ಆಕರ್ಷಕ ಪ್ರಮಾಣ ಪತ್ರ ನೀಡಲಾಗುವುದು.
* ರಸಪ್ರಶ್ನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಡಲಾಗುವುದು.
* ಸಂಪರ್ಕಿಸಿರಿ : 9945095539 ಮತ್ತು 9972932126.
ಆದಕಾರಣ ತಾವುಗಳು ತಮ್ಮ ಮನೆಯ ಮಕ್ಕಳಿಗೆ ಕಾದಂಬರಿ ಓದಿಸಿ. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ. ಸ್ಪರ್ಧೆಯ ಆಯೋಜಕರು ಭುವನೇಶ್ವರಿ ರು. ಅಂಗಡಿ ನರಗುಂದ (9945095539)
