ಮಂಗಳೂರು : ನೃತ್ಯಾಂಗನ್ ಟ್ರಸ್ಟ್ ಈ ಬಾರಿ ತನ್ನ ಮೊದಲನೇ ಆವೃತ್ತಿಯ ‘ನೃತ್ಯ ಸಂಚಯ’ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 12 ಏಪ್ರಿಲ್ 2026ರಂದು ಸಂಜೆ ಗಂಟೆ 5-30ಕ್ಕೆ ಮಂಗಳೂರು ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ನ ಎಡರುಗಡೆ, 2ನೇ ಮಹಡಿ, ‘ಶ್ರೀ ಸನ್ನಿಧಿ’ ಇಲ್ಲಿ ಆಯೋಜಿಸಿದೆ. ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆ ಶರ್ವಾಣಿ ಭಟ್ ಮತ್ತು ವಿದುಷಿ ಅನ್ನಪೂರ್ಣ ರಿತೇಶ ಇವರ ಶಿಷ್ಯೆ ತೃಪ್ತಿ ಎಂ. ಶೆಟ್ಟಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

