ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ 150’ ಸರಣಿ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2026ರಂದು ಸಂಜೆ ಗಂಟೆ 5-45ಕ್ಕೆ ಪುತ್ತೂರು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆಯರಾದ ವಿದುಷಿ ಅಕ್ಷತಾ ಕೆ., ವಿದುಷಿ ಅಪೂರ್ವ ಗೌರಿ ದೇವಸ್ಯ, ವಿದುಷಿ ವಿಭಾಶ್ರೀ ಗೌಡ ಮತ್ತು ವಿದುಷಿ ಪ್ರಣಮ್ಯ ಪಾಲೆಚ್ಚಾರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ ನಿರ್ದೇಶಕರಾದ ಶ್ರೀಮತಿ ರಾಜಿ ಬಲರಾಮ ಆಚಾರ್ಯ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.


