Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಂಪಿ ನಗರಿಯಲ್ಲಿ ರಂಗ ಚೇತನದ ಚಿಣ್ಣರ ತಂಡದಿಂದ ‘ಒಪ್ಪಂದ’ ನಾಟಕ ಪ್ರದರ್ಶನ
    Drama

    ಹಂಪಿ ನಗರಿಯಲ್ಲಿ ರಂಗ ಚೇತನದ ಚಿಣ್ಣರ ತಂಡದಿಂದ ‘ಒಪ್ಪಂದ’ ನಾಟಕ ಪ್ರದರ್ಶನ

    November 24, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊಸಪೇಟೆ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಯ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಜರಗಿದ ಅಖಿಲ ಭಾರತ ಕಲಾ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಸ್ಕೂಲಿನ ರಂಗ ಚೇತನ ಸಂಸ್ಥೆಯ ಚಿಣ್ಣರ ತಂಡದಿಂದ ಶ್ರೀ ಸದಾಶಿವ ಬಾಲಮಿತ್ರರವರು ರಚಿಸಿ ನಿರ್ದೇಶಿಸಿದ ‘ಒಪ್ಪಂದ’ ಎಂಬ ನಾಟಕವು ದಿನಾಂಕ 18-11-2023ರಂದು ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

    ನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆಗುವ ಪ್ರಯೋಜನವನ್ನು, ನವೀನ ಯುಗದ ನವ್ಯ ಆಹಾರ ಪದ್ಧತಿ ತರುವ ಆರೋಗ್ಯ ಸಮಸ್ಯೆಗಳ ಸುತ್ತ ಹೆಣೆದ ‘ಒಪ್ಪಂದ’ ನಾಟಕದಲ್ಲಿ ಶರಣ್ಯ, ಸ್ವಾತಿ ಶೆಟ್ಟಿ, ನಿರೀಕ್ಷಾ, ಸಿಂಚನಾ ಪಿ.ಎಸ್., ವರ್ಷ, ಮೋನಿಶ್, ಮನೀಶ್ ಪಿ.ಜಿ., ಅನ್ನಾ ಅಲೀಶಾ ಡಿಸೋಜಾ ಮತ್ತು ನಿಶ್ಮಿತಾರವರ ಅಭಿನಯ ಮನೋಜ್ಞವಾಗಿತ್ತು. ನಾಟಕವನ್ನು ವೀಕ್ಷಣೆ ಮಾಡಿದ ಸಂಘಟನೆಯ ಪದಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿಸಿದರು. ನಾಟಕ ತಂಡಕ್ಕೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

    ಈ ಸಂದರ್ಭದಲ್ಲಿ ರಂಗ ಚೇತನ ತಂಡದ ಪದಾಧಿಕಾರಿಗಳಾದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು, ಜತೆ ಕಾರ್ಯದರ್ಶಿ ವಸಂತ ಮಾಸ್ಟರ್ ಮೂಡಂಬೈಲ್, ಶಿವಪ್ರಸಾದ್ ಪೈವಳಿಕೆ, ಶಾಲಾ ಶಿಕ್ಷಕರಾದ ಮಧು ಶ್ಯಾಮ್, ಉದಯ ಶೆಟ್ಟಿ, ಸಂದೀಪ್ ಬಲ್ಲಾಳ್, ಭವಾನಿ ಶಂಕರ್, ಆರತಿ ಟೀಚರ್ ಮುಂತಾದವರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಕಾಂಚನೋತ್ಸವ 2023’ದಲ್ಲಿ ಕಾಂಚನಶ್ರೀ ಪ್ರಶಸ್ತಿ ಪ್ರದಾನ | ನವೆಂಬರ್ 25, 26
    Next Article ಶ್ರೇಷ್ಠ ಹಿರಿಯ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ
    roovari

    Add Comment Cancel Reply


    Related Posts

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ವಿಶೇಷ ಲೇಖನ | ಹವ್ಯಾಸಿ ರಂಗಭೂಮಿಯ ಅಪ್ರತಿಮ ಪ್ರತಿಭಾವಂತ ಕಲಾವಿದ ಆರ್.ಎಸ್. ರಾಜಾರಾಮ್

    July 10, 2026

    ಆಳ್ವಾಸ್‌ನಲ್ಲಿ ‘ಕನ್ನಡ ಗಾನ ಗುಚ್ಛ’ ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ | ಜುಲೈ 10 ಮತ್ತು 11

    July 10, 2026

    ಬೆಂಗಳೂರಿನ ರಂಗ ಶಂಕರದಲ್ಲಿ ‘ತುಘಲಕ್’ ನಾಟಕ ಪ್ರದರ್ಶನ | ಜುಲೈ 11

    July 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.