Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ
    Awards

    ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ

    April 21, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಅನಂತಪುರ ಕ್ಷೇತ್ರದ ಅನಂತಶ್ರೀ ಸಭಾಭವನದಲ್ಲಿ ದಿನಾಂಕ 12 ಏಪ್ರಿಲ್ 2026ರಂದು ಹಿರಿಯ ಮೃದಂಗ ವಾದಕ ದಿ. ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ ಜರಗಿತು.

    ಈ ಸಮಾರಂಭದಲ್ಲಿ ಸತ್ಯಶಂಕರ ಅನಂತಪುರ ಇವರ ‘ಬದುಕು-ಭಾವ-ಜೀವ’ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಇಂದಿನ ಕಾಲ ಘಟ್ಟದ ಅವಶ್ಯಕತೆಯಾಗಿದೆ. ಸತ್ಯಶಂಕರ ಅನಂತಪುರ ಇವರ ಕವನಗಳಲ್ಲಿ ಇಂತಹ ಪ್ರಯತ್ನವನ್ನು ಗುರುತಿಸಬಹುದು. ಭಾವ ಜಗತ್ತು ಮತ್ತು ವೈಚಾರಿಕತೆ ಎರಡೂ ಸಂತುಲಿತ ಪ್ರಮಾಣದಲ್ಲಿ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ. ಸತ್ಯಶಂಕರ ಅವರ ಕವಿತೆಗಳು ಅವರ ಕುಟುಂಬದ ಮೂರು ತಲೆಮಾರುಗಳ ಜನರ ಬದುಕಿನಿಂದ ಪ್ರಭಾವಿತವಾಗಿವೆ. ಇತರ ಪ್ರಕಾರಗಳಿಗೆ ಹೋಲಿಸಿದರೆ ಕಾವ್ಯ ಅತ್ಯಂತ ಪ್ರಭಾವಶಾಲಿ ಮಾಧ್ಯಮ, ಕನಿಷ್ಠ ಪದಗಳು, ರೂಪಕಗಳ ಮೂಲಕ ಪರಿಣಾಮಕಾರಿ ಸಂವಹನ ಇಲ್ಲಿ ಸಾಧ್ಯ. ಅಲ್ಲದೆ ಕವನಗಳ ಮೂಲಕ ಕವಿಯೂ ಕೆಲವೆಡೆ ಪ್ರಕಟಗೊಳ್ಳುವುದನ್ನು ಗಮನಿಸಬಹುದು” ಎಂದು ಅಭಿಪ್ರಾಯಪಟ್ಟರು.

    ಹಿರಿಯ ಮೃದಂಗ ವಾದಕ ದಿ. ಸದಾಶಿವ ಅನಂತಪುರ ಪಂಚಮ ಸ್ಮೃತಿ ಪುರಸ್ಕಾರಕ್ಕೆ ಹಿರಿಯ ಚರ್ಮ ವಾದ್ಯ ತಯಾರಕ ಕೆ. ಸದಾನಂದ ರಾವ್ ಕೂಡ್ಲು ಇವರು ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ಪ್ರಕಟಿಸಿದರು. ಹಿರಿಯ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಇವರು ಅಧ್ಯಕ್ಷತೆ ವಹಿಸಿದ್ದು, ಕೃತಿ ಪರಿಚಯಿಸಿದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು, “ಸಮಕಾಲೀನತೆಯನ್ನು ಸೃಜನಶೀಲತೆಗೆ ಒಗ್ಗಿಸಿಕೊಂಡ ಸತ್ಯಶಂಕರ ಇವರು ಗಡಿನಾಡಿನ ಸಂವೇದನಾಶೀಲ ಕವಿ ಎಂಬುದನ್ನು ತನ್ನ ರಚನೆಗಳ ಮೂಲಕ ಸಾಬೀತುಪಡಿಸಿದ್ದಾರೆ” ಎಂದರು.

    ಅನಂತಪುರ ಕ್ಷೇತ್ರ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಡಾ. ಟಿ.ಕೆ. ಯರೋದಾ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್, ಪ್ರಕೃತಿ ಯುವ ತಂಡ ಅಧ್ಯಕ್ಷ ಲೋಕಯ್ಯ ಸಿದ್ದಿಬೈಲು ಅತಿಥಿಗಳಾಗಿದ್ದರು. ಕೀರ್ತನಾ ಎನ್. ರಾವ್ ಪ್ರಸ್ತಾವನೆಗೈದರು. ಚೈತ್ರಾ ಸತ್ಯ ಶಂಕರ್ ಸ್ವಾಗತಿಸಿ, ವಿಜಯ ಕುಮಾರ್ ಆನಂತಪುರ ವಂದಿಸಿ, ಎಂ.ನಾ. ಚಂಬಲ್ತಿಮಾ‌ರ್ ನಿರೂಪಿಸಿದರು. ಸದಾಶಿವ ಅನಂತಪುರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪ್ರಕೃತಿ ಯುವ ತಂಡ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಯಿತು.

    award baikady Book release commemoration felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಶಿಬಿರಕ್ಕೆ ಆಹ್ವಾನ
    Next Article ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪ್ರಾರಂಭ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.