ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ತನಾಜೆ ತಾಳಮದ್ದಳೆ ಕೂಟವು ದಿನಾಂಕ 23 ಮೇ 2026ರಂದು ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಆನಂದ್ ಸವಣೂರು ವರದಿ ವಾಚಿಸಿದರು. ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ಲೆಕ್ಕ ಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮುಂದಿನ ಸಾಲಿಗೆ ಗೌರವಾಧ್ಯಕ್ಷರಾಗಿ ರಮಾನಂದ ನಾಯಕ್ ಬೊಳುವಾರು, ಅಧ್ಯಕ್ಷರಾಗಿ ಭಾಸ್ಕರ ಬಾರ್ಯ, ಸಂಚಾಲಕರಾಗಿ ಪ್ರೇಮಲತಾ ರಾವ್, ಅಚ್ಯುತ ಪಾಂಗಣ್ಣಾಯ, ಉಪಾಧ್ಯಕ್ಷರುಗಳಾಗಿ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಪ್ರವೀಣ ಮಣಿಯಾಣಿ, ಶುಭಾ ಅಡಿಗ, ಹರ್ಷ ಪುಣಚ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಸವಣೂರು, ಜೊತೆ ಕಾರ್ಯದರ್ಶಿ ಸತೀಶ್ ಇರ್ದೆ, ಕೋಶಾಧಿಕಾರಿಯಾಗಿ ದುಗ್ಗಪ್ಪ ನಡುಗಲ್ಲು, ಗೌರವ ಕಾರ್ಯದರ್ಶಿ ರಂಗನಾಥ ರಾವ್, ಸಂಘಟನಾ ಕಾರ್ಯದರ್ಶಿಗಳಾಗಿ ಹರಿಣಾಕ್ಷಿ ಜೆ. ಶೆಟ್ಟಿ, ಶಾರದಾ ಅರಸ್, ಕಿಶೋರಿ ದುಗ್ಗಪ್ಪ ನಡುಗಲ್ಲು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯ ನಂತರ ಪತ್ತನಾಜೆ ಕೂಟ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಸುಭದ್ರಾ ಕಲ್ಯಾಣ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ಆನಂದ ಸವಣೂರು, ನಿತೀಶ್ ಎಂಕಣಮೂಲೆ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ, ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಹರಿಣಾಕ್ಷಿ ಜೆ. ಶೆಟ್ಟಿ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್, ದುಗ್ಗಪ್ಪ ನಡುಗಲ್ಲು (ಬಲರಾಮ), ಗುಡ್ಡಪ್ಪ ಬಲ್ಯ (ಸನ್ಯಾಸಿ ಅರ್ಜುನ), ಪ್ರೇಮಲತಾ ರಾವ್ (ಸುಭದ್ರಾ), ಶಾರದಾ ಅರಸ್ (ವನಪಾಲಕ), ಭಾರತಿ ರೈ ಅರಿಯಡ್ಕ (ಸತ್ಯಭಾಮಾ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಭಾರತಿ ರೈ ಅರಿಯಡ್ಕ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ರಂಗನಾಥ ರಾವ್ ಸಹಕರಿಸಿದರು.
