Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಲಾಲ್ ಬಾಗ್ ನಲ್ಲಿ ‘ತೇಜಸ್ವಿ ನಾಟಕೋತ್ಸವ’

    January 17, 2026

    ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’ಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

    January 17, 2026

    ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲೀಷ್ ಅನುವಾದ ಕೃತಿ ಬಿಡುಗಡೆ

    January 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ತಲ್ಕಿ’ ಉಣಬಡಿಸಿದ ಬೆಂಗಳೂರಿನ ಪಯಣ ತಂಡ
    Drama

    ‘ತಲ್ಕಿ’ ಉಣಬಡಿಸಿದ ಬೆಂಗಳೂರಿನ ಪಯಣ ತಂಡ

    March 7, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ‘ಪಯಣ ಬೆಂಗಳೂರು’ ತಂಡವು ಸಮಾನತೆಯೆಡೆಗೆ ಎಂಬ ಶೀರ್ಷಿಕೆಯಲ್ಲಿ ಅಭಿನಯಿಸಿದ ನಾಟಕ ‘ತಲ್ಕಿ’. ಈ ನಾಟಕದ 9ನೇ ಪ್ರಯೋಗ ದಿನಾಂಕ 05-03-2024ರ ಮಂಗಳವಾರ ಸಂಜೆ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು.

    ಆಯನ ನಾಟಕದ ಮನೆ ಆಯೋಜಿಸಿದ್ದ ಎರಡು ದಿನದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ. ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ ಹಿರಿಯ ಜೀವಗಳು ತಮ್ಮ ಕಥೆ ಹೇಳುತ್ತಿದ್ದರೆ ನಮ್ಮದೇ ಮನೆಯ ಯಾರೋ ಹಿರಿಯರು ತಮ್ಮ ನೆನಪುಗಳ ಬುತ್ತಿಯನ್ನು ನಮ್ಮ ಮುಂದೆ ತೆರೆದಿಟ್ಟಂತೆ ಈ ನಾಟಕ ಬಹಳ ಆಪ್ತವಾಗಿತ್ತು.

    ಕೊನೆಗೆ ಅವರು ತಮ್ಮ ಪರಿಚಯ ಮಾಡಿಕೊಂಡು ಪ್ರೇಕ್ಷಕರ ನಡುವೆ ಇಳಿದು ಬಂದಾಗ ಅವರ ಕೈಕುಲುಕಿ ಶುಭಾಷಯ ಹೇಳದೇ ಇರಲು ಸಾಧ್ಯವಾಗಲಿಲ್ಲ. ಅವರ ಪರಿಚಯವನ್ನು ಕೇಳಿದಾಗ ನನಗೇ ಆಶ್ಚರ್ಯವಾಯಿತು. ಈ ನಾಟಕ ತಂಡದಲ್ಲಿ ಅಭಿನಯಿಸಿದ ತೃತೀಯ ಲಿಂಗಿಗಳಲ್ಲಿಯೂ ಕವಿಗಳಿದ್ದಾರೆ, ಲೇಖಕರಿದ್ದಾರೆ ಹಾಗೂ ಪುಸ್ತಕವನ್ನು ಬರೆದು ಲೋಕಾರ್ಪಣೆ ಮಾಡಿದ ಸಾಹಿತಿಗಳಿದ್ದಾರೆ. ಇವರಿಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಿಗಬೇಕಾದ ಸಮಾನ ಅವಕಾಶಗಳ ಪ್ರಾಮುಖ್ಯತೆ ಏನು ಎಂಬುದು ನನಗೂ ಒಂದಿಷ್ಟು ಸ್ಪಷ್ಟವಾಗತೊಡಗಿತು. ಹನಿ ಎಂಬ ಹೆಸರಿನ ತೃತೀಯ ಲಿಂಗಿಯೊಬ್ಬರು ನನ್ನ ಪಕ್ಕದಲ್ಲೇ ಕುಳಿತು ನಾಟಕ ನೋಡಿದರು. ಅವರ ಜೊತೆ ಕುಳಿತು ನಾಟಕ ನೋಡುವ ಅನುಭವವೂ ವಿಶಿಷ್ಟವಾಗಿತ್ತು. ಸಮಾಜದಲ್ಲಿ ನಾವೆಲ್ಲರೂ ಎಲ್ಲರನ್ನೂ ಸಮಾನವಾಗಿ ಕಾಣುವುದೇ ಮನುಷ್ಯತ್ವ ಅಲ್ಲವೇ?.. ಆಗಲೇ ಇಷ್ಟೊಂದು ನಾಗರೀಕ ಮಾನವ ಸಮಾಜವಾಗಿ ನಾವು ಮುಂದುವರೆದುದಕ್ಕೆ ಒಂದು ಅರ್ಥಬರುವುದು.

    ಅರವಿಂದ ಕುಡ್ಲ
    ಅಧ್ಯಾಪಕರು, ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ,
    ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

     

    Share. Facebook Twitter Pinterest LinkedIn Tumblr WhatsApp Email
    Previous Article‘ಲಾವಣ್ಯ’ದ ರಂಗಪಂಚಮಿ ನಾಟಕೋತ್ಸವದಲ್ಲಿ ‘ಸುಮ್ಮನೆ’ ನಾಟಕ ಪ್ರದರ್ಶನ
    Next Article ಪುಸ್ತಕ ವಿಮರ್ಶೆ | ಕೆ.ವಿ. ತಿರುಮಲೇಶ್ ಅವರ ‘ಕೆಲವು ಕಥಾನಕಗಳು’ – ಬದುಕಿನ ಅನೇಕ ಸಾಧ್ಯತೆಗಳ ಶೋಧ
    roovari

    Add Comment Cancel Reply


    Related Posts

    ಬೆಂಗಳೂರಿನ ಲಾಲ್ ಬಾಗ್ ನಲ್ಲಿ ‘ತೇಜಸ್ವಿ ನಾಟಕೋತ್ಸವ’

    January 17, 2026

    ಕಾಜಾಣ ರಂಗ ಶಾಲೆಯಿಂದ ರಂಗ ತರಬೇತಿ | ಫೆಬ್ರುವರಿ 01 

    January 17, 2026

    ಸುರಭಿ ಬೈಂದೂರು ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ | ಜನವರಿ 17

    January 16, 2026

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.