ಮಂಗಳೂರು : ಮೊಗವೀರ ಸಮುದಾಯದ ಮುಖಂಡ, ನಾಟಕಕಾರ ರಾಮಚಂದರ್ ಬೈಕಂಪಾಡಿ ಇವರು ದಿನಾಂಕ 14 ಏಪ್ರಿಲ್ 2026ರಂದು ನಿಧನರಾಗಿದ್ದು, ಇವರಿಗೆ 75 ವರ್ಷ ವಯಸ್ಸಾಗಿತ್ತು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ.) ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಆರಂಭದಲ್ಲಿ ನಾಟಕ ಕಾರರಾಗಿ ಜನಮನ ಗೆದ್ದಿದ್ದರು. ರಂಗಭೂಮಿ ಸಾಹಿತ್ಯ ಹಾಗೂ ಸಿನಿಮಾ ಕಲಾವಿದರೂ ಆಗಿದ್ದ ಇವರು ಕರ್ನಾಟಕ ಸರ್ಕಾರದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು. ಅವರ ‘ಎನ್ನ ಮೋಕೆದಾ’ ನಾಟಕ ಜನಪ್ರಿಯವಾಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಎರಡು ಅವಧಿಗೆ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರು ಅವಿವಾಹಿತರಾಗಿದ್ದರು.
