Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ | ಏಪ್ರಿಲ್ 7
    Awards

    ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ | ಏಪ್ರಿಲ್ 7

    April 6, 2024Updated:April 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್‌ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್‌ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 07-04-2024ರಂದು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ.

    ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಪುತ್ತೂರಿನ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ವಿಜಯ ಹಾರ್ವಿನ್ ಮತ್ತು ಬಂಟ್ವಾಳದ ಸೂರ್ಯ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಘುನಾಥ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಲೇಖಕಿ ಶ್ರೀಮತಿ ಮಲ್ಲಿಕಾ ಜೆ.ಆರ್. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ರಾಸಾ ಆರ್. ಈಶ್ವರ ಅಭಯ್ ಮತ್ತು ರಾಸಾ ಸಂಸ್ಥೆಯ ಟ್ರಸ್ಟಿಯಾದ ಶ್ರೀಮತಿ ಹೇಮ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸೇವಾ ಸಾಧಕರಾದ ಚಿತ್ರದುರ್ಗದ ಪಿ.ಜಿ. ಅನಿತಲಕ್ಷ್ಮಿ ಆಚಾರ್ಯ (ಸಾಮಾಜಿಕ ಕ್ಷೇತ್ರ), ಚೆನ್ನರಾಯಪಟ್ಟಣದ ದಿನೇಶ್ ಡಿ.ಎಸ್. (ಶೈಕ್ಷಣಿಕ ಕ್ಷೇತ್ರ) ಮತ್ತು ಸುಬ್ರಹ್ಮಣ್ಯದ ಕುಮಾರಿ ಗೌರಿತಾ ಕೆ.ಜಿ. (ಬಾಲ ಯೋಗ ಪಟು) ಅವರಿಗೆ ‘ಕರ್ನಾಟಕ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪುತ್ತೂರು ಹಾಗೂ ವಿವಿಧ ಜಿಲ್ಲೆಗಳ ಮಕ್ಕಳು ಮತ್ತು ಕಲಾವಿದರಿಂದ ಭರತನಾಟ್ಯ, ಜಾನಪದ, ಯೋಗ ಪ್ರದರ್ಶನ, ನೃತ್ಯ ಪ್ರದರ್ಶನ, ಸಂಗೀತ ಹಾಡುಗಾರಿಕೆ, ದೇಶ ಭಕ್ತಿಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಬಡಗುತಿಟ್ಟು ಯಕ್ಷಗಾನದ ಭಾಗವತಿಕೆಯ ವಿವಿಧ ಶೈಲಿ, ಮಟ್ಟುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ | ಏಪ್ರಿಲ್ 7
    Next Article ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಮತ್ತು ‘ಯಕ್ಷಗಾನ ಕಲಾ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.