ಕಾಸರಗೋಡು : ಕಾಸರಗೋಡಿನ ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿ (ರಿ.) ಇದರ ಸಹ ಸಂಸ್ಥೆಗಳಲ್ಲಿ ಒಂದಾದ ‘ನಾರಿ ಚಿನ್ನಾರಿ’ ಮಹಿಳಾ ಘಟಕ ಏರ್ಪಡಿಸುತ್ತಿರುವ ‘ಪ್ರತಿಭಾನಂದಿನಿ’ ಕಾರ್ಯಕ್ರಮವನ್ನು ದಿನಾಂಕ 25 ಫೆಬ್ರವರಿ 2026ರಂದು ಮಧ್ಯಾಹ್ನ 2-30 ಗಂಟೆಗೆ ಕಾಸರಗೋಡಿನ ಕರಂದೆಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾಕುಟೀರ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿ ಚಿನ್ನಾರಿ ಅಧ್ಯಕ್ಷೆ ಶ್ರೀಮತಿ ಕೆ. ಸವಿತಾ ಟೀಚರ್ ಇವರು ವಹಿಸಲಿದ್ದು, ನಗರ ಸಭಾ ಸದಸ್ಯೆ ಶ್ರೀಮತಿ ದಿವ್ಯಾ ಸಂದೀಪ್ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ತುದಿಗಾಲಲ್ಲಿ ನಿಲ್ಲುವ ಸ್ಪರ್ಧೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಕುಮಾರಿ ಆಶಿತಾ ಇವರನ್ನು ಸನ್ಮಾನಿಸಲಾಗುವುದು. ವಿದುಷಿ ಅಶ್ವಿನಿ ಕೆ.ಎಂ. ಮತ್ತು ವಿದುಷಿ ವಿಶಯಾ ಬಾಲಕೃಷ್ಣನ್ ಇವರಿಂದ ‘ಶಿವಾರ್ಪಣೆ’ ಭರತನಾಟ್ಯ, ವಿಜಯಲಕ್ಷ್ಮಿ ಶಾನುಭೋಗ್, ಲಕ್ಷ್ಮೀ ಕೆ., ದಿವ್ಯಾ ಗಟ್ಟಿ ಪರಕ್ಕಿಲ, ಸೌಮ್ಯಾ ಪ್ರವೀಣ್ ಮತ್ತು ಸರ್ವಮಂಗಳ ಜಯ ಪುಣಿಂಚಿತ್ತಾಯ ಇವರಿಂದ ಕವನ ವಾಚನ ಮತ್ತು ಪ್ರಣಮ್ಯ ಕೆ.ಎಸ್. ಇವರಿಂದ ಏಕ ಪಾತ್ರಾಭಿನಯ ಹಾಡು ಪ್ರಸ್ತುತಗೊಳ್ಳಲಿದೆ.

