ಬೆಂಗಳೂರು : ಕೋಚೆ ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್ ನೀಡುವ ಪ್ರಸಕ್ತ ಸಾಲಿನ ರಾಜ್ಯಮಟ್ಟದ ‘ನಾಡೋಜ ಕೋ. ಚೆನ್ನಬಸಪ್ಪ ಪ್ರಶಸ್ತಿ’ಗೆ ಸಾಹಿತಿ ಪ್ರೊ. ಜಿ. ರಾಮಕೃಷ್ಣ ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ರೂ. ಐವತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಪ್ರೊ. ಜಿ. ರಾಮಕೃಷ್ಣ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟಿನ ಗೌರವ ಸಲಹೆಗಾರರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹಾಗೂ ಅಧ್ಯಕ್ಷೆ ಶಾಂತಾ ಜಯಪ್ರಸಾದ್ ಇವರು ತಿಳಿಸಿದ್ದಾರೆ. ಸಾಹಿತಿ ಪ್ರೊ. ಜಿ. ರಾಮಕೃಷ್ಣ ಇವರು ಕೋ. ಚೆನ್ನಬಸಪ್ಪ ಅವರ ಅನುಗಾಲದ ಒಡನಾಡಿದ್ದು, ಕನ್ನಡ ನಾಡಿನ ಹಿರಿಯ ಸಂಸ್ಕೃತಿ ಚಿಂತಕ, ಶಿಕ್ಷಣ ತಜ್ಞರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.
