08 ಫೆಬ್ರವರಿ 2023, ಮಂಗಳೂರು: “ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ, ಎಸ್.ವಿ.ಪಿ.ಯವರ ಎರಡು ತತ್ವಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದೇವೆ” – ಡಾ. ಬಿ. ಎ. ವಿವೇಕ ರೈ.
ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ 2023 ಸೈಂಟ್ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾ ಭವನದಲ್ಲಿ ಫೆ.8ರಂದು ಸಂಪನ್ನಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬಿ.ಎ.ವಿವೇಕ ರೈಯವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ ಎಸ್.ವಿ.ಪಿ.ಯವರ ಎರಡು ತತ್ವಗಳನ್ನು ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದರು.”ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ” ಎಂಬ ಮಹಾ ಸಂಶೋಧನಾ ಗ್ರಂಥವನ್ನು ಬರೆದು ಬುದ್ಧನ ಅಹಿಂಸಾ ತತ್ವದ ಕಡೆ ಬೆಳಕು ಚೆಲ್ಲಿದ ತಾಳ್ತಜೆಯವರು ಒಂದು ಕಡೆ, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಕೃಷಿ ಮಾಡಿ ಕಾಯಕ ತತ್ವದ ಕಡೆಗೆ ಒತ್ತು ಕೊಟ್ಟ ಡಾ.ಒ.ಎಲ್.ನಾಗಭೂಷಣ ಸ್ವಾಮಿ ಇನ್ನೊಂದು ಕಡೆ. ಬುದ್ಧ ತತ್ವ ಮತ್ತು ಬಸವ ತತ್ವ ಎರಡನ್ನೂ ಎಸ್.ವಿ. ಪಿ.ಯವರು ತನ್ನ ಜೀವನದಲ್ಲಿ ಅಳವಡಿಸಿಕೊಂಡವರು.” ಎಂದು ತನ್ನ ಗುರುಗಳಾದ ಎಸ್.ವಿ.ಪರಮೇಶ್ವರ ಭಟ್ಟರ ಶಿಷ್ಯರಾದ ,ಅವರನ್ನು ಅತೀ ಹತ್ತಿರದಿಂದ ಬಲ್ಲ ,ಅವರೊಂದಿಗೆ ಕನ್ನಡದ ಸೇವೆ ಮಾಡಿದ ಡಾ ಬಿ.ಎ.ವಿವೇಕ ರೈಯರು ಹೇಳಿದರು.ವಿಶ್ರಾಂತ ಕನ್ನಡ ಪ್ರಾಧ್ಯಾಕರೂ ಮುಂಬಯಿ ವಿಶ್ವ ವಿದ್ಯಾನಿಲಯದ ಹಿರಿಯ ಸಂಶೋಧಕರೂ ಆದ ಡಾ. ತಾಳ್ತಜೆ ವಸಂತ ಕುಮಾರ್ ಇವರಿಗೆ 2023 ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರನ್ನು ವಿಶ್ರಾಂತ ಕುಲಪತಿಗಳು ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಕರಾದ ಡಾ. ಕೆ.ಚಿನ್ನಪ್ಪ ಗೌಡ ಅಭಿನಂದಿಸಿದರು. 2023ನೆ ಸಾಲಿನ ಪ್ರಶಸ್ತಿಯನ್ನು ಖ್ಯಾತ ವಿಮರ್ಶಕರು,ಮತ್ತು ಅನುವಾದಕರೂ ಆದ ಡಾ. ಒ.ಎಲ್. ನಾಗಭೂಷಣ ಸ್ವಾಮಿಯವರಿಗೆ ನೀಡಿ ಗೌರವಿಸಲಾಯಿತು. ಡಾ ಸತ್ಯನಾರಾಯಣ ಮಲ್ಲಿ ಪಟ್ಟಣ ನಿವೃತ್ತ ಪ್ರಾಂಶುಪಾಲರು ಮತ್ತು ವಿಶ್ರಾಂತ ಕನ್ನಡ ಪ್ರದ್ಯಪಕರು ನಾಗಭೂಷಣ ಸ್ವಾಮಿಯವರನ್ನು ಅಭಿನಂದಿಸಿ ಮಾತನಾಡಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಶುಭಾಂಶನೆಗೈದರು. ಎಸ್. ವಿ. ಪಿ. ಯವರ ಪುತ್ರ ಶ್ರೀ ಎಸ್. ಪಿ.ರಾಮಚಂದ್ರ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ನಾ.ದ.ಶೆಟ್ಟಿ ಮತ್ತು ಡಾ. ನರಸಿಂಹ ಮೂರ್ತಿಯವರು ಸಹಕರಿಸಿದರು.
Subscribe to Updates
Get the latest creative news from FooBar about art, design and business.
Previous Articleಅಂತರಂಗ ಬಹಿರಂಗ ತಂಡದ ‘ಹಿಂಗ್ ಮಾಡಿದ್ರೆ ಹೇಗೆ?’ – ನಾಟಕ ವಿಮರ್ಶೆ