ಉಪ್ಪಿನಕುದ್ರು : ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಜಂಟಿ ಆಶ್ರಯದಲ್ಲಿ ಹಾಗೂ ಡಾ. ಸುಧಾಮೂರ್ತಿ ಮತ್ತು ಡಾ. ಪಿ. ದಯಾನಂದ ಪೈ ಪ್ರಾಯೋಜಿತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 100ನೇ ತಿಂಗಳ ಕಾರ್ಯಕ್ರಮವನ್ನು ದಿನಾಂಕ 27 ಅಕ್ಟೋಬರ್ 2024ರಂದು ಪ್ರಾತಃಕಾಲ 5-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 5-00 ಗಂಟೆಗೆ ಉದಯರಾಗದ ಉದ್ಘಾಟನೆ, ವೇದಮೂರ್ತಿ ಅರೆಹೊಳೆ ವೆಂಕಟೇಶ ಶಾಸ್ತ್ರಿಯವರ ಶಿಷ್ಯರಿಂದ ‘ವೇದಘೋಷ’, ಕುಂದಾಪರದ ಖ್ಯಾತ ಶಿಶುತಜ್ಞರಾದ ಡಾ. ಹೆಚ್.ಆರ್. ಹೆಬ್ಬಾರ್ ಇವರಿಂದ ‘ಹಿಂದೂಸ್ತಾನಿ ಸಂಗೀತ’, ಶ್ರೀ ಸುಬ್ರಹ್ಮಣ್ಯ ನಾವುಡ, ಶ್ರೀ ಉಮೇಶ ಸುವರ್ಣ ಹಾಗೂ ತಂಡದವರಿಂದ ‘ಯಕ್ಷಗಾನ ಹಾಡುಗಳು’, ಕುಂದಾಪುರದ ವಿದುಷಿ ನಳಿನಿ ವೆಂಕಟರಮಣ ರಾವ್ ಇವರಿಂದ ‘ಕರ್ನಾಟಕ ಸಂಗೀತ’, ಶ್ರೀಮತಿ ವಸಂತಿ ಆರ್. ಪಂಡಿತ್ ಹಾಗೂ ತಂಡದವರಿಂದ ‘ವಿಷ್ಣು ಸಹಸ್ರನಾಮ’, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವಿದ್ಯಾರ್ಥಿಗಳಿಂದ ‘ಗೊಂಬೆಯಾಟ ಪ್ರಾತ್ಯಕ್ಷಿಕೆ’ ನಡೆಯಲಿದೆ.
10-00 ಗಂಟೆಗೆ 9 ಭಜನಾ ತಂಡಗಳ ಸಂಯೋಜಕರಿಂದ ‘ಭಕ್ತಿ ರಾಗ’. ಮಣಿಪಾಲ ಈಶ್ವರ ನಗರದ ಶ್ರೀಮತಿ ಮಾಯಾ ಕಾಮತ್, ಕುಂದಾಪುರದ ಶ್ರೀಮತಿ ರಮ್ಯಾ ಮಲ್ಯ ಮತ್ತು ತಂಡದವರಿಂದ ‘ಭಕ್ತಿ ಸಂಗೀತ’, ಉಡುಪಿಯ ಏಕತ್ವ ಭಜನಾ ಮಂಡಳಿ ಇವರಿಂದ ಭಜನೆ ಹಾಡುಗಳು, ಮಣಿಪಾಲದ ಶಾಂತಿ ನಗರ ಇದರ ಮಕ್ಕಳಿಂದ ‘ಹುಲಿ ವೇಷ ಕುಣಿತ’ ಮತ್ತು ಗಣೇಶ ಭಜನಾ ಮಂಡಳಿಯವರಿಂದ ‘ದೇವರ ನಾಮ ಹಾಡುಗಳು’, ಮಣಿಪಾಲ ಪ್ರಗತಿ ನಗರದ ಶ್ರೀ ಭದ್ರಕಾಳಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಮತ್ತು ಜಾನಪದ ನೃತ್ಯ ಹಾಗೂ ಯುಕ್ತಾವತಿ ರಾಮಚಂದ್ರ ಭಂಡಾರಿ ಮತ್ತು ಬಳಗದವರಿಂದ ‘ಕುಣಿತ ಭಜನೆ’, ಮಣಿಪಾಲ ರಾಹುಲ್ ನಗರದ ಶ್ರೀ ವೀರ ಮಾರುತಿ ಭಜನಾ ಮಂಡಳಿಯವರಿಂದ ‘ಭಜನಾ ಹಾಡುಗಳು’, ಮಣಿಪಾಲ ಅನಂತ ನಗರದ ಸೋನಿಯಾ ಕ್ಲಿನಿಕ್ ಶ್ರೀ ಕೃಷ್ಣ ಭಜನಾ ಮಂಡಳಿ ಇದರ ಸದಸ್ಯರಿಂದ ‘ಕುಣಿತದ ಭಜನೆ’, ಉಡುಪಿ ಅಂಬಾಗಿಲು ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಇವರಿಂದ ‘ದೇವರ ಸ್ತುತಿ’, ಕಟಪಾಡಿ ಶ್ರೀ ಭಜನಾಸಕ್ತ ಭಜನಾ ಮಂಡಳಿಯವರಿಂದ ‘ಭಜನೆ ಹಾಡುಗಳು’, ಹಕ್ಲಾಡಿ ಸರಕಾರಿ ಪ್ರೌಢ ಶಾಲೆ ಇದರ ವಿದ್ಯಾರ್ಥಿಗಳಿಂದ ‘ವೈವಿಧ್ಯಮಯ ಕಾರ್ಯಕ್ರಮಗಳು’, ತ್ರಾಸಿ ಮಾಸ್ಟರ್ ಅನುರಾಗ್ ನಾಯಕ್ ಇವರಿಂದ ‘ಲಘು ಸಂಗೀತ’, ಗಂಗೊಳ್ಳಿ ಮಾಸ್ಟರ್ ಶಾಮ್ ಜಿ.ಎನ್. ಪೂಜಾರಿ ಇವರಿಂದ ‘ಕೊಳಲು ವಾದನ’ ಪ್ರಸ್ತುತಗೊಳ್ಳಲಿದೆ.
ಮಧ್ಯಾಹ್ನ 2-30 ಗಂಟೆಗೆ 100ನೇ ತಿಂಗಳ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಅಧ್ಯಕ್ಷತೆ ವಹಿಸಲಿದ್ದು, ಕೆಳಾಕೊಡ್ಲು ಹಳ್ಳಿಹೊಳೆ ಶ್ರೀ ವೆಂಕಟೇಶ್ವರ ಕ್ಯಾಶ್ ಇಂಡಸ್ಟ್ರೀಸ್ ಇದರ ಮಾಲಕರಾದ ಶ್ರೀ ವಿಠೋಭ ಶ್ರೀನಿವಾಸ ಶೆಣೈ ಇವರು ಉದ್ಘಾಟನೆ ಮಾಡಲಿರುವರು.
ಸಂಜೆ 5-00 ಗಂಟೆಗೆ ಮಂಗಳೂರಿನ ಶ್ರೀ ಗಿರೀಶ್ ನಾಗೇಶ್ ಪ್ರಭು ಇವರಿಂದ ‘ಭಕ್ತಿ ಸಂಗೀತ’, ಮಂಗಳೂರಿನ ಶ್ರೀ ಜನಾರ್ದನ ಹಂದೆಯವರಿಂದ ‘ಭಾವಗೀತೆಗಳು’. 6-00 ಗಂಟೆಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರಿಂದ ಸಂಧ್ಯಾರಾಗದ ಉದ್ಘಾಟನೆ ನಡೆಯಲಿದೆ. ಬೆಂಗಳೂರಿನ ನಾದೋಪಾಸಕ ವಿದ್ವಾನ್ ಶ್ರೀ ವಾಗೀಶ್ ಭಟ್, ಡಾ. ಕಾಶೀನಾಥ್ ಪೈ ಗಂಗೊಳ್ಳಿ ಮತ್ತು ಹೆರೂರು ಶ್ರೀ ವೆಂಕಟರಮಣ ಬಿಡುವಾಳ್ ಮತ್ತು ತಂಡದರಿಂದ ‘ಸಂಧ್ಯಾರಾಗ’ ಪ್ರಸ್ತುತಗೊಳ್ಳಲಿದೆ. 8-30 ಗಂಟೆಗೆ ಶ್ರೀ ಶಶಿಕಾಂತ್ ಶೆಟ್ಟಿ ಸಂಯೋಜಿತ, ಮಂಗಳೂರಿನ ಕರ್ನಾಟಕ ಯಕ್ಷಧಾಮ ಪ್ರಾಯೋಜಕತ್ವದಲ್ಲಿ ಕಾರ್ಕಳದ ಶ್ರೀ ದೇವಿ ಲಲಿತ ಕಲಾ ವೃಂದದವರಿಂದ ‘ಶಶಿಪ್ರಭಾ ಪರಿಣಯ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.