ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮವು ದಿನಾಂಕ 20-03-2024ರಂದು ಗೋವಿಂದ ದಾಸ ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ಪೂರ್ವಿ ಅಶೋಕ ಕುಮಾರ ಇವರು ಖಾಲಿದ್ ಹುಸೇನಿ ಬರೆದ ‘ದಿ ಕೈಟ್ ರನ್ನರ್’ ಎಂಬ ಪುಸ್ತಕವನ್ನು ಪರಿಚಯಿಸಿ “ಸಾಮಾಜಿಕ ಸ್ಥಿತ್ಯಂತರಗಳ ನಡುವೆ ಮಾನವೀಯ ಸಂಬಂಧಗಳ ಚರ್ಚೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು, ಪೂರ್ವಿ ಅಶೋಕ ಕುಮಾರ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಪ್ರಾಧ್ಯಾಪಕರುಗಳಾದ ಡಾ. ಆಶಾಲತಾ ಪಿ., ಡಾ. ಸಂತೋಷ ಆಳ್ವ, ಪುನೀತಾ, ಶಿಲ್ಪಾರಾಣಿ, ಪ್ರತಿಕ್ಷಾ, ದಯಾ ಸುವರ್ಣ, ಗ್ರಂಥಪಾಲಕಿ ಡಾ. ಸುಜಾತಾ ಬಿ., ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ರಿಯಾ ಸ್ವಾಗತಿಸಿದರು.