ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 47’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ದಿನಾಂಕ 21 ಮಾರ್ಚ್ 2026ರಂದು ಅಪರಾಹ್ನ 3-00 ಗಂಟೆಗೆ ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಮಣಿಪಾಲ ಡಾಟ್ ನೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಮತಿ ಶಶಿಕಲಾ ಎನ್. ಭಟ್ ಹಾಗೂ ಡಾ. ಕೌಸ್ತುಭ ಪಿ. ರಾವ್ ಇವರಿಂದ ವೀಣಾವಾದನ ಕಚೇರಿ ನಡೆಯಲಿದ್ದು, ಇವರಿಗೆ ಡಾ. ಬಾಲಚಂದ್ರ ಆಚಾರ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ನಂತರ ಸಂಜೆ 4-30 ಗಂಟೆಗೆ ವಿದ್ವಾನ್ ವೇಣುಗೋಪಾಲ ಶ್ಯಾನುಭೋಗ್ ಮತ್ತು ಶಿಷ್ಯರಾದ ಶ್ರೀರಾಮ ಕಾಂಚನ ಹಾಗೂ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಇವರಿಂದ ವಯೊಲಿನ್ ವಾದನ ಕಚೇರಿ ನಡೆಯಲಿದ್ದು, ಇವರಿಗೆ ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ ಕಾಂಚನ ಹಾಗೂ ಮೋರ್ಸಿಂಗ್ ನಲ್ಲಿ ವೆಂಕಟ ಯಶಸ್ವಿ ಕಬೆಕ್ಕೋಡು ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.

