ಉಡುಪಿ : ಸುಮನಸಾ ಕೊಡವೂರು ಉಡುಪಿ (ರಿ.) ಸಂಸ್ಥೆಯ 25ನೇ ಸಂವತ್ಸರ ಸಡಗರದ ಪ್ರಯುಕ್ತ ‘ರಜತ ಸಂಭ್ರಮ’ವನ್ನು ದಿನಾಂಕ 31 ಮೇ 2026ರಂದು ಸಂಜೆ 5-00 ಗಂಟೆಗೆ ಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಮನಸಾ ಕೊಡವೂರು ಇವರ ರಜತ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಹರಿಪ್ರಸಾದ್ ರೈ ಇವರು ವಹಿಸಲಿದ್ದು, ಹಿರಿಯ ಮಹಾ ಪ್ರಬಂಧಕರಾದ ಅಶೋಕ ಕುಮಾರ್ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದಾರೆ. ದಿವಾಕರ್ ಕಟೀಲ್, ಧೃತಿ ಸಂತೋಷ, ವರಾಲಿ ಪ್ರಕಾಶ್ ಇವರ ಸಂಯೋಜನೆಯಲ್ಲಿ ‘ಸುಮ ಲಹರಿ’ ರಂಗ ಗೀತಾ ಗಾಯನ ಸಂಜೆ 5-00 ಗಂಟಗೆ ನಡೆಯಲಿದೆ. ರಾತ್ರಿ 7-00 ಗಂಟೆಗೆ ಮಕ್ಕಳ ರಂಗ ಶಿಬಿರ ನಾಟಕ ‘ಅಟ್ಟು ಮುಟ್ಟ’, ‘ರಿಟೈಯರ್ಡ್ ಬೆಕ್ಕು’ ಮತ್ತು ‘ಸೂಪರ್ ಹೀರೋಸ್ ಆಫ್ ಸುಮನಸಾ’ ಮಂಗಳೂರಿನ ಚರಿತ್ ಸುವರ್ಣ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ.

