ಬೆಂಗಳೂರು : ಸಾಂಸ್ಕೃತಿಕ ಸಂಘಟನೆ ರಂಗಚಂದಿರ (ರಿ.) ಆಯೋಜಿಸುವ ಸಾಹಿತಿ ನಾಟಕಕಾರ ಡಾ. ಡಿ.ಕೆ. ಚೌಟ -88ರ ನೆನಪಿನಲ್ಲಿ ರಂಗಗೀತೆ, ರಂಗ ಗೌರವ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 01 ಜೂನ್ 2026ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಚಿಂತಕರಾದ ಪ್ರೊ. ಕೆ.ಈ. ರಾಧಾಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗ ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರ್, ಹಿರಿಯ ರಂಗ ನಿರ್ದೇಶಕರಾದ ಸುರೇಶ ಅನಗಳ್ಳಿ, ಹಿರಿಯ ಸಾಹಿತಿ ಮುಹಮ್ಮದ್ ಕುಳಾಯಿ, ರಂಗ ಸಂಘಟಕರಾದ ಶ್ರೀಮತಿ ಪ್ರಿಯ ಎಸ್.ಕೆ. ಸಿಂಗ್ ಮತ್ತು ಹಿರಿಯ ಪತ್ರಕರ್ತರಾದ ಕೆ. ಶಿವಸುಬ್ರಮಣ್ಯ ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಗುವುದು. ಬೆಂಗಳೂರಿನ ರಾಜ್ ಗುರು ಹೊಸಕೋಟೆ ಮತ್ತು ತಂಡದವರಿಂದ ರಂಗಗೀತೆ ಗಾಯನ ಪ್ರಸ್ತುತಗೊಳ್ಳಲಿದೆ. 6-00 ಗಂಟೆಗೆ ಡಿ.ಕೆ. ಚೌಟರವರ ಕಾದಂಬರಿ ಆಧಾರಿತ ನಾಟಕ ‘ಮಿತ್ತಬೈಲ್ ಯಮುನಕ್ಕ’ ಪ್ರದರ್ಶನಗೊಳ್ಳಲಿದೆ.

