ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗ ಸ್ವರೂಪ ರಂಗೋತ್ಸವ 2025’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 16-04-2025ರಿಂದ 19-04-2025ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಇವರಿಗೆ ರಂಗ ಸ್ವರೂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿನಾಂಕ 19-04-2025ರಂದು ಸಂಜೆ ಗಂಟೆ 5-00ಕ್ಕೆ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ. ನೋಂದಾವಣೆಗಾಗಿ ಸಂಪರ್ಕಿಸಿರಿ 9880835659 ಮತ್ತು 9964022578.