Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಿರಿಯ ಸಾಹಿತಿ ಪತ್ರಕರ್ತ ಶ್ರೀ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ
    Awards

    ಹಿರಿಯ ಸಾಹಿತಿ ಪತ್ರಕರ್ತ ಶ್ರೀ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ

    June 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಪರವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್‌ರವರಿಗೆ ದಿನಾಂಕ 21 ಜೂನ್ 2026ರಂದು ಸಸಿಹಿತ್ಲುವಿನ ಶ್ರೀಯುತರ ಸ್ವಗೃಹದಲ್ಲಿ ನಡೆದ ಸರಳ ಮತ್ತು ಆಪ್ತ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ನಾ. ದಾಮೋದರ ಶೆಟ್ಟಿಯವರು ಮಾತನಾಡಿ, “ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆರಿಸಿದ್ದಕ್ಕೆ ಸಂತೋಷವಾಗಿದೆ” ಎಂದರು.

    ಹಿರಿಯ ಜನಪದ ತಜ್ಞ ಕೆ.ಕೆ. ಪೇಜಾವರರವರು ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು. ಜನಪ್ರಿಯ ಸಿನೆಮಾ ರಂಗಭೂಮಿ ನಟ ನವೀನ್ ಡಿ. ಪಡೀಲ್ ಮಾತನಾಡಿ ಪರಮಾನಂದ ಸಾಲ್ಯಾನ್‌ರವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು. ಸಂಘಟಕ, ನಟ ಯತೀಶ್ ಬೈಕಂಪಾಡಿಯವರು ಪರಮಾನಂದರು ಲವಲವಿಕೆಯಿಂದ ಇದ್ದಾರೆ ಆದರೆ ಇನ್ನಷ್ಟು ಆತ್ಮಸ್ತೈರ್ಯದಿಂದ ಇದ್ದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ‘ರಂಗ ಭಾಸ್ಕರ ಪ್ರಶಸ್ತಿ’ ವರ್ಷಂಪ್ರತಿ ಹಿರಿಯ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡುವ ಪ್ರಶಸ್ತಿಯಾಗಿದೆ. ಬಹುಮುಖ ಪ್ರತಿಭೆ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈಯವರು ಪ್ರಾಯೋಜಿಸುತ್ತಿದ್ದಾರೆ. ಪ್ರಶಸ್ತಿಯು ಸನ್ಮಾನ ಪತ್ರ, ಶಾಲು, ಹಾರ, ಸ್ಮರಣಿಕೆ ಮತ್ತು ಪ್ರಶಸ್ತಿ ಮೊತ್ತ ರೂ.15,000/- ಹಾಗೂ ರಂಗಸಂಗಾತಿ ಗೆಳೆಯರ ಬಳಗ ಕೊಡಮಾಡಿದ ರೂ.20,000/- ಒಟ್ಟು 35,000/- ಮೊತ್ತವನ್ನು ಒಳಗೊಂಡಿತ್ತು.

    ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರುಗಳಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಉಡುಪಿಯ ರವಿರಾಜ್ ಹೆಚ್.ಪಿ., ರಾಜೇಶ್ ಭಟ್ ಪಣಿಯಾಡಿ, ಮೈಮ್ ರಾಮದಾಸ್, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ರಂಜನ್ ಬೋಳೂರು, ಪ್ರಮೀಳಾ ದೀಪಕ್, ಯಶೋಧರ ಕೋಟ್ಯಾನ್, ಉಪನ್ಯಾಸಕ ಕರುಣಾಕರ ಬಳ್ಕೂರು, ರಂಗಸಂಗಾತಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಬಜಾಲ್, ಚಂದ್ರಶೇಖರ ಕೂಳೂರು ಮುಂತಾದವರು ಮತ್ತು ಪರಮಾನಂದರ ಶಿಷ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು. ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

    award baikady felicitation roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಾಪ್ರಕಾರಗಳ ಉದ್ಘಾಟನೆ
    Next Article ‘ನೊಂದ ಹೃದಯಗಳು’ ಡಿಜಿಟಲ್ ಕವನ ಸಂಕಲನಕ್ಕೆ ಕವಿಗಳಿಂದ ಕವನಗಳ ಆಹ್ವಾನ
    roovari

    Add Comment Cancel Reply


    Related Posts

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026

    ವಿಶೇಷ ಲೇಖನ | ಹವ್ಯಾಸಿ ರಂಗಭೂಮಿಯ ಅಪ್ರತಿಮ ಪ್ರತಿಭಾವಂತ ಕಲಾವಿದ ಆರ್.ಎಸ್. ರಾಜಾರಾಮ್

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.