Subscribe to Updates

    Get the latest creative news from FooBar about art, design and business.

    What's Hot

    ವಿದ್ಯಾರ್ಥಿಗಳಿಗಾಗಿ ‘ಮಸುಮ’ ಸಣ್ಣ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 20

    September 7, 2026

    ಕವಿಗೋಷ್ಠಿ, ಗೀತಗಾಯನ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ | ಸೆಪ್ಟೆಂಬರ್ 20

    September 7, 2026

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ‘ದಸರಾ ಕವಿಗೋಷ್ಠಿ’ | ಅಕ್ಟೋಬರ್ 18

    September 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರಿನ ಪಿವಿಎಸ್ ಗ್ರೂಪ್‌ನ ಮುಖ್ಯಸ್ಥೆ ಸರೋಜಿನಿ ಎಂ.ಕುಶೆ ಅವರಿಗೆ ರಂಗಭೂಮಿ ಉಡುಪಿ ಗೌರವ
    Drama

    ಮಂಗಳೂರಿನ ಪಿವಿಎಸ್ ಗ್ರೂಪ್‌ನ ಮುಖ್ಯಸ್ಥೆ ಸರೋಜಿನಿ ಎಂ.ಕುಶೆ ಅವರಿಗೆ ರಂಗಭೂಮಿ ಉಡುಪಿ ಗೌರವ

    November 22, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಮಂಗಳೂರಿನ ಪಿವಿಎಸ್ ಗ್ರೂಪ್‌ನ ಚೇರ್‌ಮೆನ್ ಹಾಗೂ ಮ್ಯಾನೆಜಿಂಗ್ ಡೈರೆಕ್ಟರ್ ಸರೋಜಿನಿ ಎಂ.ಕುಶೆ ಅವರಿಗೆ ರಂಗಭೂಮಿ ಉಡುಪಿ ವತಿಯಿಂದ ‘ರಂಗಭೂಮಿ ಗೌರವ’ ಪ್ರದಾನ ಕಾರ್ಯಕ್ರಮ ದಿನಾಂಕ 18-11-2023ರಂದು ಮಂಗಳೂರಿನ ಅತ್ತಾವರ ಸರೋಜಿನಿ ಮಧುಸೂದನ ಕುಶೆ ಇನ್ಸ್ಟಿಟ್ಯೂಶನ್‌ನಲ್ಲಿ ನಡೆದ 21ನೇ ‘ಸರೋಜ ಮಧು ಕಲಾ ಉತ್ಸವ’ದ ಸಂದರ್ಭದಲ್ಲಿ ನಡೆಯಿತು.
    ರಂಗಭೂಮಿ ಉಡುಪಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ರಂಗಭೂಮಿ ಉಡುಪಿಯ ರಂಗ ಚಟುವಟಿಕೆಗಳಿಗೆ ಪಿವಿಎಸ್ ಗ್ರೂಪ್ ಸಂಸ್ಥೆ ನೀಡುತ್ತಿರುವ ನಿರಂತರ ಪ್ರೋತ್ಸಾಹ ಎಂದೂ ಮರೆಯಲಾಗದು. ಈ ನಿಟ್ಟಿನಲ್ಲಿ ಸಂಸ್ಥೆಯ ಚೇರ್‌ಮೆನ್ ಹಾಗೂ ಎಂ.ಡಿ. ಆಗಿರುವ ಸರೋಜಿನಿ ಮಧುಸೂದನ ಕುಶೆ ಅವರಿಗೆ ಈ ಗೌರವವನ್ನು ಸಲ್ಲಿಸುತ್ತಿರುವುದು ಸಂತೋಷ ತಂದಿದೆ” ಎಂದರು.

    ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಅವರು ಸನ್ಮಾನ ಪತ್ರವನ್ನು ವಾಚಿಸಿ, ರಂಗಭೂಮಿಗೆ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಶ್ರೀಮತಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಮಂಗಳೂರಿನ ವಾಥಿಕಾ ಇಂಟರ್‌ನ್ಯಾಶನಲ್ ಟ್ರಾವೆಲ್ಸ್ ಇದರ ಮುಖ್ಯಸ್ಥೆ ವಾಥಿಕಾ ಪೈ, V4 ಮೀಡಿಯಾದ ಎಂಜಿ ಲಕ್ಷ್ಮಣ್ ಕುಂದರ್, ಸಂಸ್ಥೆಯ ಪ್ರಿನ್ಸಿಪಾಲ್ ಬಿಂದುಸಾರ ಶೆಟ್ಟಿ, ಪೋಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ನಾಗರಾಜ ಆಚಾರ್ಯ ಹಾಗೂ ರಂಗಭೂಮಿ ಉಡುಪಿಯ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು, ರಾಜಗೋಪಾಲ್ ಬಲ್ಲಾಳ್, ಕೋಶಾಧಿಕಾರಿ ಯು.ಭೋಜ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಜಯಪ್ರಕಾಶ್ ಕೆದ್ಲಾಯ, ಪ್ರೀತಂ ಹಾಗೂ ಹರೀಶ್ ಕಲ್ಮಾಡಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಾಂಗಣದಿಂದ ದಿ. ಕೆ.ಎಸ್.ಉಪಾಧ್ಯಾಯ ಸಂಸ್ಮರಣೆ – ತಾಳಮದ್ದಳೆ
    Next Article ರಾಗಧನ ಸಂಸ್ಥೆಯ ‘ರಾಗ ರತ್ನ ಮಾಲಿಕೆ -18’ ರಲ್ಲಿ ವಿದುಷಿ ರಂಜನಿ ಹೆಬ್ಬಾರ್ ಸಂಸ್ಮರಣಾ ಸಂಗೀತ ಕಛೇರಿ
    roovari

    Add Comment Cancel Reply


    Related Posts

    ಕಲಾಂಗಣದಲ್ಲಿ ‘ವಂದೇ ಮಾತರಂ’ ನಾಟಕ ಪ್ರದರ್ಶನ

    September 7, 2026

    ಅಭಿನಯ ಭಾರತಿಯ ‘ವಜ್ರಸಿರಿ ರಂಗೋತ್ಸವ’ದ ಐದನೇ ದಿನದ ಕಾರ್ಯಕ್ರಮ

    September 7, 2026

    ಅಭಿನಯ ಭಾರತಿಯ ‘ವಜ್ರಸಿರಿ ರಂಗೋತ್ಸವ’ದ ನಾಲ್ಕನೇ ದಿನದ ಕಾರ್ಯಕ್ರಮ

    September 6, 2026

    ರಂಗಮನೆಯಲ್ಲಿ ಬೆಳ್ಳಿ ಸಂಭ್ರಮಕ್ಕೆ ಚಾಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    September 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.