ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಪ್ರಸ್ತುತ ಪಡಿಸುವ ‘ರಂಗಪಂಚಮಿ’ ಡಾ. ಶಿಲ್ಪಾ ಎಸ್. ಕಾಮತ್ ಇವರ ಚಿತ್ರಕಲೆ ಪ್ರದರ್ಶನವನ್ನು ದಿನಾಂಕ 09 ಮೇ 2026ರಂದು ಸಂಜೆ 4-00 ಗಂಟೆಗೆ ಕಾಸರಗೋಡಿನ ಬೀರಂತಬೈಲು ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ವೈದ್ಯರಾದ ಡಾ. ಯಶವಂತ್ ಎನ್. ನಾಯಕ್ ಇವರು ಉದ್ಘಾಟನೆ ಮಾಡಲಿದ್ದು, ಕಣ್ಣಿನ ತಜ್ಞರಾದ ಡಾ. ಅನಂತ್ ಕಾಮತ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರಕಲೆ ಪ್ರದರ್ಶನವು ದಿನಾಂಕ 10 ಮೇ 2026ರಂದು ಸಹ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ.

