ಬೈಂದೂರು : ಲಾವಣ್ಯ (ರಿ.) ಬೈಂದೂರು ಇದರ 49ನೇ ವಾರ್ಷಿಕೋತ್ಸವ ಹಾಗೂ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಸ್ಮರಣಾರ್ಥ ‘ರಂಗಶ್ರೀ-ರಂಗಹಬ್ಬ’ ಕಾರ್ಯಕ್ರಮವನ್ನು ದಿನಾಂಕ 04ರಿಂದ 08 ಮಾರ್ಚ್ 2026ರವರೆಗೆ ಪ್ರತಿ ದಿನ ಸಂಜೆ 6-30 ಗಂಟೆಗೆ ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ದಿನಾಂಕ 04 ಮಾರ್ಚ್ 2026ರಂದು ‘ರಂಗಶ್ರೀ-ರಂಗಹಬ್ಬ’ದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಲಾವಣ್ಯ (ರಿ.) ಇದರ ಅಧ್ಯಕ್ಷರಾದ ನರಸಿಂಹ ಬಿ. ನಾಯಕ್ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಬೈಂದೂರು ರಿಥಂ ನೃತ್ಯ ಹಾಗೂ ಕಲಾ ಶಾಲೆ ಇವರ ಸ್ಥಾಪಕರಾದ ನಾಗೇಂದ್ರ ಕುಮಾರ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬಿ. ಗಣೇಶ ಕಾರಂತ ಇವರ ನಿರ್ದೇಶನದಲ್ಲಿ ಲಾವಣ್ಯ (ರಿ.) ಬೈಂದೂರು ಇವರಿಂದ ‘ಸಂಜೆ ಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 05 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಧರ ಪಿ. ಇವರು ವಹಿಸಲಿದ್ದು, ಹವ್ಯಾಸಿ ರಂಗಭೂಮಿ ಕಲಾವಿದರಾದ ಶ್ರೀಶ ಭಟ್ ನಾಯ್ಕನಕಟ್ಟೆ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪುನೀತ್ ರಂಗಾಯಣ ಇವರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ನೆನಪು ಕಲ್ಚರಲ್ ಮತ್ತು ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್ ತಂಡದವರಿಂದ ‘ಮಾಯಾದ್ವೀಪ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 06 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೂರು ರಾಮಕೃಷ್ಣ ಶೇರುಗಾರ್ ಇವರು ವಹಿಸಲಿದ್ದು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸಿ.ಎನ್. ಬಿಲ್ಲವ ಶಿರೂರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಮೀನನಾಥ ಇವರ ನಿರ್ದೇಶನದಲ್ಲಿ ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರಿಂದ ‘ಭಂಡ ನನ್ನ ಗಂಡ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 07 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಂದ್ರ ಹೆಜ್ಜಾಲು ಇವರು ವಹಿಸಲಿದ್ದು, ಯಕ್ಷಗಾನ ಭಾಗವತರಾದ ಸುಧಾಕರ ಕೊಠಾರಿ ವಸ್ರೆ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಗಣೇಶ ದೇವಾಡಿಗ ಉಪ್ಪುಂದ ಇವರ ನಿರ್ದೇಶನದಲ್ಲಿ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡ ಇವರಿಂದ ‘ಜ್ವಾಲಾಪ್ರತಾಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 08 ಮಾರ್ಚ್ 2026ರಂದು ನಡೆಯುವ ‘ರಂಗಶ್ರೀ-ರಂಗಹಬ್ಬ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗೋವಿಂದ ಬಾಬು ಪೂಜಾರಿ ಇವರು ವಹಿಸಲಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಮೇಶ ಶ್ಯಾನ್ ಭಾಗ್ ಬಿಜೂರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹುಲುಗಪ್ಪ ಕಟ್ಟೀಮನಿ ಇವರ ನಿರ್ದೇಶನದಲ್ಲಿ ನಟಮಿತ್ರರು ಹವ್ಯಾಸಿ ಕಲಾಸಂಘ ಇವರಿಂದ ‘ಆ ಊರು ಈ ಊರು’ ನಾಟಕ ಪ್ರದರ್ಶನ ನಡೆಯಲಿದೆ.

