ಕೋಟ : ಯಕ್ಷದೇಗುಲ (ರಿ.) ಬೆಂಗಳೂರು ಇವರ ಸಂಯೋಜನೆಯಲ್ಲಿ ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಕವಿ ಮುದ್ದಣ ವಿರಚಿತ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 19 ಏಪ್ರಿಲ್ 2026ರಂದು ರಾತ್ರಿ 7-30 ಗಂಟೆಗೆ ಕೋಟ ಹಂದೆ ದೇವಸ್ಥಾನದಲ್ಲಿ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದರ್ಶನ ಉರಾಳ ಕೋಟ ಇವರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳುವ ಈ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ರಾಘವೇಂದ್ರ ಮಯ್ಯ ಹಾಲಾಡಿ ಮತ್ತು ಲಂಬೋದರ ಹೆಗಡೆ ನಿಟ್ಟೂರು, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಚಂಡೆಯಲ್ಲಿ ಸುದೀಪ ಉರಾಳ ಹಂದಟ್ಟು ಮತ್ತು ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ರಾಘವೇಂದ್ರ ತುಂಗ ಕೆ., ಸ್ಪೂರ್ತಿ ಭಟ್, ನರಸಿಂಹ ತುಂಗ, ರಾಜು ಪೂಜಾರಿ, ನಾಗರಾಜ್ ಪೂಜಾರಿ ಮತ್ತಿತರರು ಸಹಕರಿಸಲಿದ್ದಾರೆ.

