ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಇವರ ವತಿಯಿಂದ 251ನೇ ತಿಂಗಳ ಮನೆ ಮನ ‘ಸಾಹಿತ್ಯ ಹುಣ್ಣಿಮೆ’ ಕಾರ್ಯಕ್ರಮವನ್ನು ದಿನಾಂಕ 29 ಜೂನ್ 2026ರಂದು ಸಂಜೆ 5-30 ಗಂಟೆಗೆ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
21 ವರ್ಷಗಳ ಕಾಲ ಹುಣ್ಣಿಮೆಯ ಬೆಳಕಿನಲ್ಲಿ ಸಾಹಿತ್ಯ, ಸಂಸ್ಕೃತಿಯ ಸಂಭ್ರಮ, 21 ವರ್ಷಗಳ ಸುದೀರ್ಘ ಪಯಣ, ನೂರಾರು ಕಲಾವಿದರ ಸೃಜನಶೀಲ ಸಂಗಮ, ಹಾಸ್ಯ, ಕವನ, ಚುಟುಕು, ಗಾಯನಗಳ ಮನರಂಜನಾ ಮೇಳ, ಬಡಾವಣೆಗಳಿಂದ ಬಡಾವಣೆಗಳಿಗೆ ಸಾಹಿತ್ಯದ ಬೆಳಕು, ಕನ್ನಡ ಮನಸ್ಸುಗಳನ್ನು ಬೆಸೆಯುವ ಹುಣ್ಣಿಮೆ ಸಂಭ್ರಮ.

