Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಖ್ಯಾತ ರಂಗಭೂಮಿ ತಜ್ಞ ಉತ್ತಮ ಸಂಘಟಕ ಮಂಡ್ಯ ರಮೇಶ್

    July 14, 2026

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    July 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಎರಿಕ್ ಒಝೇರಿಯೊಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ನುಡಿನಮನ
    Commemoration

    ಎರಿಕ್ ಒಝೇರಿಯೊಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ನುಡಿನಮನ

    September 5, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಇತ್ತೀಚೆಗೆ ದಿವಂಗತರಾದ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊರವರಿಗೆ ನುಡಿನಮನ ಸಲ್ಲಿಸಲು ‘ಉತ್ರಾಂಜಲಿ; ಕಾರ್ಯಕ್ರಮವನ್ನು ಬೆಂದೂರು ಸಂತ ಸೆಬೆಸ್ಟಿಯನ್ ಮಿನಿ ಹಾಲಿನಲ್ಲಿ ದಿನಾಂಕ 04 ಸೆಪ್ಟೆಂಬರ್ 2025ರಂದು ಆಯೋಜಿಸಿತ್ತು.

    ಪ್ರಸ್ತಾವನೆಗೈದು ಸ್ವಾಗತ ಕೋರಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತನ್ನ ಮತ್ತು ಎರಿಕ್‌ರವರ 37 ವರ್ಷಗಳ ಒಡನಾಟವನ್ನು ಮೆಲುಕು ಹಾಕಿದರು. ಎರಿಕ್‌ರವರ ಪತ್ನಿ ಜೊಯ್ಸ್‌ರವರು, ಒಝೇರಿಯೊ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಗಳು ಡಾ. ರಶ್ಮಿ, ಅಳಿಯ ಸಂಗೀತಗಾರ ಆಲ್ವಿನ್ ಫೆರ್ನಾಂಡಿಸ್, ಮೊಮ್ಮಕ್ಕಳಾದ ಅಮನ್, ಜಿಯಾ ಹಾಗೂ ಅಕಾಡಮಿ ಅಧ್ಯಕ್ಷರು, ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್‌.ಒ. ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಲೇಖಕರ ಒಕ್ಕೂಟದ ಮುಖ್ಯಸ್ಥ ರಿಚ್ಚಾರ್ಡ್ ಮೊರಾಸ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಪ್ರಮುಖ ಭಾಷಣಕಾರರು, ಲೇಖಕರು, ಸಂಘಟಕರು ಮತ್ತು ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದರು.

    ಎರಿಕ್ ಒಝೇರಿಯೊರವರ ಕಾರ್ಯಕ್ಷೇತ್ರದ ವಿವಿಧ ಮಜಲುಗಳಾದ – ವ್ಯಕ್ತಿ ಮತ್ತು ಶಕ್ತಿ (ವಾಲ್ಟರ್ ನಂದಳಿಕೆ), ಕೊಂಕಣಿ ಅಕಾಡೆಮಿ ಮತ್ತು ಶಿಕ್ಷಣ ಕ್ಷೇತ್ರ (ಸ್ಟೀವನ್ ಕ್ವಾಡ್ರಸ್), ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರ (ಚರಣ್ ಮಲ್ಯ) ಹಾಗೂ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರೇರಣಾಶಕ್ತಿ (ಕನ್ಸೆಪ್ಟಾ ಫೆರ್ನಾಂಡಿಸ್) ಇವರುಗಳು ತಮ್ಮ ಒಡನಾಟಗಳನ್ನು ಆತ್ಮೀಯವಾಗಿ ಅನಾವರಣಗೊಳಿಸಿ ಮಾತನಾಡಿದರು. ಎರಿಕ್‌ರವರ ಅಭಿಮಾನಿ ನಾರಾವಿಯ ಗೋಪಾಲಕೃಷ್ಣ ಇವರು ಸ್ಥಳದಲ್ಲೇ ರಚಿಸಿದ ಕವಿತೆಗೆ ಗಾಯಕ ರೊನಿ ಕ್ರಾಸ್ತಾ ಸ್ವರ ಸಂಯೋಜಿಸಿ ಹಾಡಿದರು. ಅಕಾಡೆಮಿ ಸದಸ್ಯ ಸಮರ್ಥ್ ಭಟ್ ಧನ್ಯವಾದವನ್ನಿತ್ತರು. ರೊನಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.

    baikady commemoration konkani Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ
    Next Article ನಾಟಕ ಡಿಪ್ಲೋಮ ಕೋರ್ಸ್‌ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 10
    roovari

    Add Comment Cancel Reply


    Related Posts

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    July 14, 2026

    ಪುಸ್ತಕ ವಿಮರ್ಶೆ | ಎಸ್.ಎಲ್. ಭೈರಪ್ಪ ಮೌಲ್ಯ ಮಾಪನ

    July 14, 2026

    ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯಿಂದ ಭಿನ್ನ ಪ್ರಯೋಗ ‘ನಾಟಕದ ಓದು’

    July 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.