ಮಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ಇಲ್ಲಿ ‘ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ’ ಸಮಾರಂಭವು ದಿನಾಂಕ 13-01-2024ರಂದು ಮುಂಜಾನೆ 9-00 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಕೇ.ಕ.ಸಾ.ವೇ. ಸ್ಥಾಪಕಾಧ್ಯಕ್ಷರಾದ ಶ್ರೀ ಕೊಟ್ರೇಶ ಉಪ್ಪಾರ ಇವರು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ವೇದಿಕೆ ಅಧ್ಯಕ್ಷರಾದ ಡಾ. ಸುರೇಶ ನೆಗಳಗುಳಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರತ್ನಾ ಭಟ್, ಹಾ.ಮ. ಸತೀಶ, ಡಾ. ಸುರೇಶ್ ನೆಗಳಗುಳಿ ಇವರ ‘ಕಡಲಹನಿ ಒಡಲ ಧ್ವನಿ’ ಎಂಬ ಗಜಲ್ ಸಂಕಲನವನ್ನು ಮಂಗಳೂರಿನ ಖ್ಯಾತ ಗಜಲ್ ಕವಿ, ನಟ, ಶ್ರೀ ಮಹಮ್ಮದ್ ಬಡ್ಡೂರು ಲೋಕಾರ್ಪಣಾ ಮಾಡಲಿದ್ದಾರೆ.
ಪುತ್ತೂರಿನ ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಸಾಹಿತಿ, ಯಕ್ಷಗಾನ ಪಟು ಶ್ರೀಮತಿ ರತ್ನಾ ಕೆ. ಭಟ್ ತಲಂಜೇರಿ ಇವರು ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದು, ಖ್ಯಾತ ವ್ಯಂಗ್ಯ ಚಿತ್ರಗಾರರು ಹಾಗೂ ನಗೆ ಚುಟುಕು ಕವಿಗಳಾದ ಶ್ರೀ ವೆಂಕಟ್ ಭಟ್ ಎಡನೀರು ಇವರು ಗೋಷ್ಠಿ ಚಾಲನೆ ನೀಡಲಿರುವರು. ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್, ಪಿಂಗಾರ ಪತ್ರಿಕೆಯ ರೇಮಂಡ್ ಡಿಕುನ್ಹ, ಕೇ.ಕ.ಸಾ.ವೇ.ದ.ಕ. ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಪರಿಮಳಾ ಮಹೇಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಈ ಕಾರ್ಯಕ್ರಮಕ್ಕೆ ವೇದಿಕೆಯ ಅಧ್ಯಕ್ಷರು, ಉಪಾದ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವ ಸದಸ್ಯರು ಎಲ್ಲಾ ಸಾಹಿತ್ಯಾಸಕ್ತರಿಗೆ ಸ್ವಾಗತವನ್ನು ಕೋರಿದೆ.