ಮಂಗಳೂರು : ಕೋಡಿಕಲ್‌ನ ಸರಯೂ ಬಾಲ ಯಕ್ಷ ವೃಂದದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಸಪ್ತಾಹ – 2026’ ಸಾಧಕ ಸಮ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮಗಳನ್ನು ದಿನಾಂಕ 25 ಮೇ 2026ರಿಂದ 01 ಜೂನ್ 2026ರವರೆಗೆ ಪ್ರತಿ ದಿನ ಸಂಜೆ ಗಂಟೆ 5-30ರಿಂದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 25 ಮೇ 2026ರಂದು ಸಂಜೆ 3-00 ಗಂಟೆಗೆ ಕೊಂಚಾಡಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಇವರಿಂದ ವರ್ಕಾಡಿ ಮಧುಸೂದನ ಅಲೆವೂರಾಯ ಇವರ ನಿರ್ದೇಶನದಲ್ಲಿ ‘ದಕ್ಷಾದ್ವರ’ ತಾಳಮದ್ದಳೆ ಹಾಗೂ 5-00 ಗಂಟೆಗೆ ‘ಶ್ರೀ ಏಕಾದಶಿ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 26 ಮೇ 2026ರಂದು ‘ಮೀನಾಕ್ಷಿ ಕಲ್ಯಾಣ’, ದಿನಾಂಕ 27 ಮೇ 2026ರಂದು ‘ಕಚ – ದೇವಯಾನಿ’, ದಿನಾಂಕ 28 ಮೇ 2026ರಂದು ‘ಕೃಷ್ಣಾರ್ಜುನ’, ದಿನಾಂಕ 29 ಮೇ 2026ರಂದು ‘ಬಬ್ರುವಾಹನ’, ದಿನಾಂಕ 30 ಮೇ 2026ರಂದು ‘ಶ್ರೀದೇವಿ ಮಹಾತ್ಮೆ’, ದಿನಾಂಕ 31 ಮೇ 2026ರಂದು ‘ಶ್ರೀ ಕೃಷ್ಣ ಲೀಲೆ – ಚಂದ್ರಾವಳಿ ವಿಲಾಸ’, ದಿನಾಂಕ 01 ಜೂನ್ 2026ರಂದು ‘ಪುಣ್ಯಕೋಟಿ’ – ಜಾಬಾಲಿ ನಂದಿನಿ ಸಂವಾದ’ ಪ್ರಸಂಗದ ಯಕ್ಷಗಾನಗಳು ಪ್ರದರ್ಶನಗೊಳ್ಳಲಿದೆ.
ದಿನಾಂಕ 31 ಮೇ 2026ರಂದು ಬೆಳಿಗ್ಗೆ 9-00 ಗಂಟೆಗೆ ಕೋಡಿಕಲ್ ಸರಯೂ ಮಹಿಳಾ ವೃಂದದವರಿಂದ ‘ನಾಸಾಚ್ಛೇದನ’, ಮಧ್ಯಾಹ್ನ 11-00 ಗಂಟೆಗೆ ಕೊಂಚಾಡಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಇವರಿಂದ ‘ಗಿರಿಜಾ ಕಲ್ಯಾಣ’, 1-00 ಗಂಟೆಗೆ ಸುರತ್ಕಲ್ ಯಕ್ಷಕಲಾ ಇವರಿಂದ ‘ರಾವಣ ವಧೆ’, 3-00 ಗಂಟೆಗೆ ಕದ್ರಿ ಯಕ್ಷ ಮಂಜುಳಾ ಮಹಿಳಾ ತಾಳಮದ್ದಲೆ ಬಳಗದವರಿಂದ ‘ಮಂಡೋದರಿ ಪರಿಣಯ’ ಮಹಿಳಾ ತಾಳಮದ್ದಲೆ ಸಂಭ್ರಮ ನಡೆಯಲಿದೆ.

