Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ
    Awards

    ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ

    December 16, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ, ಮುಂಗಾರು ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ‘ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ಗೆ ವಡ್ಡರ್ಸೆಯವರ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.

    ಕಳೆದ ಒಂಭತ್ತು ವರ್ಷಗಳಿಂದ ನಾಡಿನ ಗಣ್ಯ ಪತ್ರಕರ್ತರಿಗೆ ಬ್ರಹ್ಮಾವರ ಪತ್ರಕರ್ತರ ಸಂಘ ಈ ಪ್ರಶಸ್ತಿ ನೀಡುತ್ತ ಬಂದಿದ್ದು, 2025ನೇ ಸಾಲಿನ ಪ್ರಶಸ್ತಿಗೆ ಬೈಕಂಪಾಡಿಯವರನ್ನು ಆಯ್ಕೆ ಮಾಡಿದೆ. ದಿನಾಂಕ 27 ಡಿಸೆಂಬರ್ 2025ರಂದು ಶನಿವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.

    ಬೈಕಂಪಾಡಿಯವರು ವಡ್ಡರ್ಸೆಯವರ ಒಡನಾಡಿಯಾಗಿ ಹತ್ತು ವರ್ಷ ಕಾಲ ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆಯಲ್ಲಿ 2 ವರ್ಷ, ದಿವ್ಯವಾಣಿ ವಾರಪತ್ರಿಕೆಯಲ್ಲಿ 3 ವರ್ಷ, ಮುಂಗಾರು ದಿನಪ್ರತಿಕೆ 10 ವರ್ಷ ಮುಖ ವರದಿಗಾರರಾಗಿ, ಕನ್ನಡಪ್ರಭ ದಿನಪ್ರತಿಕೆಯಲ್ಲಿ 15 ವರ್ಷ ಪ್ರಧಾನ ವರದಿಗಾರರಾಗಿ, ‘ಬಿಂಬಧ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೀಗೆ ಹತ್ತು ಹಲವು ಮಜಲುಗಳಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.

    ಮುಂಗಾರು ಎನ್ನುವ ಪತ್ರಿಕೋದ್ಯಮದ ಕುರಿತ ಪುಸ್ತಕ, ಪ.ಗೋ. ಪ್ರಪಂಚ-ಪತ್ರಿಕೋದ್ಯಮ ಕುರಿತ ಪುಸ್ತಕ, ರಾಜಕೀಯ ಒಳಸುಳಿಗಳು ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಕೃತಿ ಹೊರತಂದಿದ್ದಾರೆ. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದ ಇವರ ಸಾಧನೆ ಪರಿಗಣಿಸಿ ವಡ್ಡರ್ಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಆಚ್ಲಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕಿರಣ್ ತುಂಗ ತಿಳಿಸಿದ್ದಾರೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಆಕೃತಿ ಆಶಯ ಪ್ರಕಾಶನದ ‘ಕರಾವಳಿ ಕವನಗಳು’ ಪುಸ್ತಕ ಬಿಡುಗಡೆ ಸಮಾರಂಭ
    Next Article ಮೂಡುಬಿದಿರೆಯ ರಾಜ ಸಭಾಂಗಣದಲ್ಲಿ ‘ಎಕ್ಸಲೆಂಟ್ ಸಂಗೀತ ಸಂಜೆ’ | ಡಿಸೆಂಬರ್ 18
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.